Select Your Language

Notifications

webdunia
webdunia
webdunia
webdunia

ತಮ್ಮ ಕುಟುಂಬದಲ್ಲೇ ಇಷ್ಟೆಲ್ಲಾ ನಡೆಯುವಾಗ ಸುಮ್ಮನಿದ್ರು: ಯುವ ಮಾಜಿ ಪತ್ನಿ ಪೋಸ್ಟ್ ವೈರಲ್

Yuva-Sridevi

Krishnaveni K

ಬೆಂಗಳೂರು , ಮಂಗಳವಾರ, 29 ಜುಲೈ 2025 (17:45 IST)
ಬೆಂಗಳೂರು: ಡಿಬಾಸ್ ಫ್ಯಾನ್ಸ್ ನಟಿ ರಮ್ಯಾ ವಿರುದ್ಧ ಅಶ್ಲೀಲ ಮೆಸೇಜ್ ಹಾಕಿ ನಿಂದಿಸಿದ್ದಕ್ಕೆ ಅವರ ಪರ ಶಿವಣ್ಣ, ವಿನಯ್ ರಾಜ್ ಕುಮಾರ್ ಪೋಸ್ಟ್ ಮಾಡಿದ ಬೆನ್ನಲ್ಲೇ ದೊಡ್ಮನೆ ಮಾಜಿ ಸೊಸೆ ಯುವ ಮಾಜಿ ಪತ್ನಿ ಶ್ರೀದೇವಿ ಬೈರಪ್ಪ ತಮ್ಮ ಕುಟುಂಬದಲ್ಲೇ ಇಷ್ಟೆಲ್ಲಾ ನಡೆಯುವಾಗ ಸುಮ್ಮನಿದ್ರು ಎಂದು ಟಾಂಗ್ ಕೊಟ್ಟಿದ್ದಾರೆ.

ಎಲ್ಲರಿಗೂ ಗೊತ್ತಿರುವ ಹಾಗೆ ಯುವರಾಜ್ ಕುಮಾರ್ ಮತ್ತು ಪತ್ನಿ ಶ್ರೀದೇವಿ ಪರಸ್ಪರ ಬೇರೆಯಾಗಿದ್ದಾರೆ. ಇವರಿಬ್ಬರ ವಿಚ್ಛೇದನ ವಿಚಾರ ಮಾಧ್ಯಮಗಳಲ್ಲಿ ಹರಿದಾಡಿತ್ತು. ಯುವ ಬೇರೊಬ್ಬ ನಟಿಯ ಜೊತೆಗೆ ಸಂಬಂಧ ಹೊಂದಿದ್ದರು ಎಂದು ಶ್ರೀದೇವಿ ಆರೋಪಿಸಿದ್ದರು. ಯುವ ಕೂಡಾ ಶ್ರೀದೇವಿ ವಿರುದ್ಧ ಮಾನಸಿಕ ಕಿರುಕುಳ ಆರೋಪ ಮಾಡಿದ್ದರು.

ಇದೀಗ ಡಿ ಬಾಸ್ ಫ್ಯಾನ್ಸ್ ನಿಂದ ರಮ್ಯಾಗೆ ತೊಂದರೆಯಾಗಿದೆ ಎಂದ ತಕ್ಷಣ ಶಿವಣ್ಣ, ವಿನಯ್ ರಾಜ್ ಕುಮಾರ್ ಮಹಿಳೆಯರಿಗೆ ಅಪಮಾನವಾಗುವುದನ್ನು ಸಹಿಸಲಾಗದು ಎಂದು ಪೋಸ್ಟ್ ಮಾಡಿದ್ದರು. ಇದಕ್ಕೀಗ ಯವ ಮಾಜಿ ಪತ್ನಿ ಶ್ರೀದೇವಿ ಬೈರಪ್ಪ ತಮ್ಮ ಇನ್ ಸ್ಟಾಗ್ರಾಂ ಪೋಸ್ಟ್ ನಲ್ಲಿ ಟಾಂಗ್ ಕೊಟ್ಟಿದ್ದಾರೆ.

ಮಾಧ್ಯಮಗಳಲ್ಲಿ ಮಹಿಳೆಯನ್ನು ಅವಮಾನಿಸುವುದರ ವಿರುದ್ಧ ಮಾತನಾಡುವುದು ನೋಡುವಾಗ, ತಮ್ಮ ಕುಟುಂಬದಲ್ಲೇ ಇದೆಲ್ಲ ನಡೆಯುವಾಗ ಮಾತನಾಡದೇ ಸುಮ್ಮನೆ ಇದ್ರಲ್ಲ, ಆವಾಗ ನಿದ್ರೆ ಮಾಡ್ತಾ ಇದ್ರ ಎಲ್ಲಾ?! ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ರಮ್ಯಾ ಬೆಂಬಲಕ್ಕೆ ನಿಂತ ದೊಡ್ಮನೆಯವರಿಗೆ ಟಾಂಗ್ ಕೊಟ್ಟಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ವಿದೇಶದಲ್ಲಿ 'ಸು ಫ್ರಮ್ ಸೋ' ನೋಡಲು ಕಾಯುತ್ತಿರುವ ಕನ್ನಡಭಿಮಾನಿಗಳಿಗೆ ಗುಡ್‌ನ್ಯೂಸ್‌