ಬೆಂಗಳೂರು: ಕೇವಲ ದೊಡ್ಮನೆ ಟ್ಯಾಗ್ ಇಟ್ಟುಕೊಂಡು ಚಿತ್ರರಂಗದಲ್ಲಿ ಹೀರೋ ಆಗಲು ಸಾಧ್ಯವಿಲ್ಲ ಎಂದು ಯುವ ರಾಜ್ ಕುಮಾರ್ ಗೆ ಗೊತ್ತಿದೆ. ಇದೀಗ ನಿನ್ನೆ ಬಿಡುಗಡೆಯಾಗಿರುವ ಎಕ್ಕ ಸಿನಿಮಾದಲ್ಲಿ ಯುವ ನಟನಾಗಿಯೂ ಗೆದ್ದಿದ್ದಾರೆ. ಈ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು ಇಲ್ಲಿದೆ ವಿವರ.
ಎಕ್ಕ ಸಿನಿಮಾ ಬಗ್ಗೆ ಯುವ ರಾಜ್ ಕುಮಾರ್ ಗೆ ಸಾಕಷ್ಟು ನಿರೀಕ್ಷೆಯಿತ್ತು. ಪುನೀತ್ ರಾಜ್ ಕುಮಾರ್ ತೀರಿಕೊಂಡ ಬಳಿಕ ಯುವ ಮೇಲೆ ದೊಡ್ಮನೆ ಅಭಿಮಾನಿಗಳು ಭಾರೀ ನಿರೀಕ್ಷೆಯಿಟ್ಟುಕೊಂಡಿದ್ದರು. ಆದರೆ ಮೊದಲ ಸಿನಿಮಾದಲ್ಲಿ ಅವರ ಅಭಿನಯ ಹೇಳಿಕೊಳ್ಳುವ ಮಟ್ಟಿಗಿಲ್ಲ ಎಂದು ಟೀಕೆಗೊಳಗಾದರು.
ಆದರೆ ಎಕ್ಕ ಸಿನಿಮಾದಲ್ಲಿ ಅದೆಲ್ಲವನ್ನೂ ಯುವ ತೊಡೆದು ಹಾಕಿದ್ದಾರೆ. ಸಿನಿಮಾದಲ್ಲಿ ನಟನಾಗಿಯೂ ಅವರು ಗೆದ್ದಿದ್ದಾರೆ. ಮೊದಲ ದಿನ ಜನ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಒಳ್ಳೆಯ ವಿಮರ್ಶೆ ತಿಳಿಸಿದ್ದಾರೆ.
ಮೊದಲ ದಿನ ಎಕ್ಕ ಸಿನಿಮಾ 2 ಕೋಟಿ ರೂ.ಗಳಷ್ಟು ಗಳಿಕೆ ಮಾಡಿದೆ. ಸದ್ಯದ ಮಟ್ಟಿಗೆ ಇದು ಉತ್ತಮ ಗಳಿಕೆಯೇ. ಕನ್ನಡ ಚಿತ್ರರಂಗದಲ್ಲಿ ಸಿನಿಮಾ ರಿಲೀಸ್ ಆಗದೇ ಸೊರಗಿ ಹೋಗಿತ್ತು. ಆದರೆ ಈಗ ಎಕ್ಕ ಗೆಲುವಿನ ಸೂಚನೆ ನೀಡಿದ್ದು ನಿರ್ಮಾಪಕರಲ್ಲಿ ಹೊಸ ಭರವಸೆ ಮೂಡಿಸಿದೆ. ಇನ್ನೀಗ ಮುಂದಿನ ತಿಂಗಳಿನಿಂದ ಸ್ಟಾರ್ ಸಿನಿಮಾಗಳು ಬಿಡಗಡೆಯಾಗಲಿದ್ದು ಚಿತ್ರರಂಗ ಚೇತರಿಕೆಯ ನಿರೀಕ್ಷೆಯಲ್ಲಿದೆ.