Webdunia - Bharat's app for daily news and videos

Install App

ಯುವರಾಜ್ ಕುಮಾರ್ ಜೊತೆ ವಿಚ್ಛೇದನ ವಿವಾದದ ನಡುವೆ ಕರ್ನಾಟಕಕ್ಕೆ ಬಂದು ಮತ್ತೆ ವಿದೇಶಕ್ಕೆ ಹಾರಿದ ಶ್ರೀದೇವಿ ಬೈರಪ್ಪ

Krishnaveni K
ಗುರುವಾರ, 4 ಜುಲೈ 2024 (11:40 IST)
Photo Credit: X
ಬೆಂಗಳೂರು: ಯುವ ರಾಜ್ ಕುಮಾರ್ ಜೊತೆ ವಿವಾಹ ವಿಚ್ಛೇದನ ವಿವಾದದ ನಡುವೆ ಭಾರತಕ್ಕೆ ಬಂದಿದ್ದ ಪತ್ನಿ ಶ್ರೀದೇವಿ ಬೈರಪ್ಪ ಈಗ ಮತ್ತೆ ಅಮೆರಿಕಾದತ್ತ ಪ್ರಯಾಣ ಬೆಳೆಸಿದ್ದಾರೆ. ಇದರ ನಡುವೆ ಅವರು ತಮ್ಮ ವಿಚ್ಛೇದನದ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಕಳೆದ 15 ದಿನಗಳಿಂದ ಕರ್ನಾಟಕದಲ್ಲಿದ್ದಾಗ ನನ್ನ ಖಾಸಗಿತನವನ್ನು ಗೌರವಿಸಿದ್ದಕ್ಕೆ ಧನ್ಯವಾದಗಳು. ಹಾರ್ವರ್ಡ್ ನಲ್ಲಿ ನಾನೊಂದು ಶೈಕ್ಷಣಿಕ ಯೋಜನೆ ಹಾಕಿಕೊಂಡಿದ್ದು ಅದನ್ನು ಮುಂದುವರಿಸಲು ಮತ್ತೆ ಅಮೆರಿಕಾಗೆ ಹೋಗುತ್ತಿದ್ದೇನೆ. ಸರಿಯಾದ ಸಮಯ ಬಂದಾಗ ಹಿಂದಿರುಗಿ ಬರುತ್ತೇನೆ.

ಕಳೆದೊಂದು ದಶಕದಿಂದ ನನ್ನ ಜೊತೆಗಿದ್ದ ಸ್ನೇಹಿತರೂ ಕಳೆದ ಕೆಲವು ದಿನಗಳ ಹಿಂದೆ ನಡೆದ ಸುಳ್ಳಿನ ಸರಮಾಲೆಗೆ ಬಲಿಯಾಗಬೇಕಾಗಿ ಬಂದಿದ್ದು ದುರದೃಷ್ಟಕರ. ಆದರೂ ಸಹ ಧೃತಿ ಗೆಡಗೆ, ತಾಳ್ಮೆ ಕಳೆದುಕೊಳ್ಳದೆ ನನ್ನ ಜೊತೆ ನಿಂತ ಹಿತೈಷಿಗಳಿಗೆ ಧನ್ಯವಾದ ಹೇಳುತ್ತೇನೆ. ಈ  ವಿಚಾರದಲ್ಲಿ ನಿಮಗಾದ ನೋವಿಗೆ ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ.

15 ದಿನಗಳ ಮಟ್ಟಿಗೆ ಭಾರಕ್ಕೆ ಬಂದಿದ್ದ ಶ್ರೀದೇವಿ ಬೈರಪ್ಪ ಈಗ ಮರಳಿ ಅಮೆರಿಕಾಗೆ ತೆರಳಿದ್ದಾರೆ. ಸತ್ಯ ಮತ್ತು ನ್ಯಾಯ ಮೇಲುಗೈ ಸಾಧಿಸುತ್ತದೆ ಎಂದು ನಂಬಿದ್ದೇನೆ ಎಂದಿದ್ದಾರೆ. ಆದರೆ ವಿಚ್ಛೇದನದ ಕುರಿತಾಗಿ ಹೆಚ್ಚೇನೂ ಹೇಳಿಕೊಂಡಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜೈಲಿಗೆ ಎಂಟ್ರಿ ಕೊಡುವಾಗ ದರ್ಶನ್ ಮುಖ ಹೇಗಿತ್ತೂ ಗೊತ್ತಾ, ವೈರಲ್ ಫೋಟೋ ಇಲ್ಲಿದೆ

ಜೈಲಲ್ಲೂ ದರ್ಶನ್‌ಗೆ ಡೆವಿಲ್ ಸಿನಿಮಾದ್ದೇ ಚಿಂತೆ

ವಿಶೇಷ ದಿನದಂದೇ ಮಗನಿಗೆ ನಾಮಕರಣ ಮಾಡಿದ ಸಿಂಹಪ್ರಿಯ ದಂಪತಿ

ಅಜಯ್ ರಾವ್ ವಿಚ್ಛೇದನಕ್ಕೆ ಕಾರಣ ಬಯಲು

ದರ್ಶನ್ ಅರೆಸ್ಟ್ ಆಗಿದ್ದಕ್ಕೆ ರಮ್ಯಾ ಅಚ್ಚರಿಯ ಹೇಳಿಕೆ

ಮುಂದಿನ ಸುದ್ದಿ
Show comments