Select Your Language

Notifications

webdunia
webdunia
webdunia
webdunia

ಪ್ರಭಾಸ್ ಪ್ರಸ್ತುತ ನಟಿಸುತ್ತಿರುವ ಈ ನಾಲ್ಕು ಚಿತ್ರಕ್ಕೆ ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ!

ಪ್ರಭಾಸ್ ಪ್ರಸ್ತುತ ನಟಿಸುತ್ತಿರುವ ಈ ನಾಲ್ಕು ಚಿತ್ರಕ್ಕೆ ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ!
ಹೈದರಾಬಾದ್ , ಬುಧವಾರ, 9 ಡಿಸೆಂಬರ್ 2020 (13:31 IST)
ಹೈದರಾಬಾದ್ : ನಟ ಪ್ರಭಾಸ್ ಟಾಲಿವುಡ್ ನ ಖ್ಯಾತ ನಟರಲ್ಲಿ ಒಬ್ಬರು. ಅವರು ಟಾಲಿವುಡ್ ಚಿತ್ರರಂಗಕ್ಕೆ ಸೂಪರ್ ಹಿಟ್ ಚಿತ್ರಗಳನ್ನು ನೀಡುವುದರ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಪ್ರಸ್ತುತ ಅವರು ನಾಲ್ಕು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಹೌದು. ಬಾಹುಬಲಿ ಚಿತ್ರದ ಮೂಲಕ ಜನರಿಗೆ ಚಿರಪರಿಚಿತರಾದ ನಟ ಪ್ರಭಾಸ್ ಅವರು ಪ್ರಸ್ತುತ ರಾಧಾ ಕೃಷ್ಣ ನಿರ್ದೇಶನದ ‘ರಾಧೆ ಶ್ಯಾಮ್’,  ನಿರ್ದೇಶಕ ನಾಗ ಅಶ್ವಿನ್ ನಿರ್ದೇಶನದ ‘ಮಹಾನದಿ’ , ನಿರ್ದೇಶಕ ಓಂರಾವತ್ ನಿರ್ದೇಶನದ ‘ಆದಿಪುರುಷ’ , ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಪ್ರಭಾಸ್ ಅವರು ತಮ್ಮ ಚಿತ್ರಗಳಲ್ಲಿ ನಟಿಸಲು 70 ಕೋಟಿ ರೂ. ಗಳಿಗಿಂತ ಹೆಚ್ಚು ರೂ ಗಳಿಸುತ್ತಿದ್ದಾರೆ ಎಂದು ವರದಿಯಾಗಿದೆ. ಅಲ್ಲದೇ ಇದೀಗ 4 ಚಿತ್ರಗಳಲ್ಲಿ ನಟಿಸಲು ಅವರಿಗೆ  270 ಕೋಟಿ ರೂ.ಗಳವರೆಗೆ ಸಂಭಾವನೆ ನೀಡಲಾಗುತ್ತಿದೆ ಎಂಬ ವದಂತಿ ಕೇಳಿಬರುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಸೋಂಕಿನಿಂದ ಬಳಲುತ್ತಿರುವ ಖ್ಯಾತ ತಮಿಳು ನಟ