Publish Date: Sat, 13 Apr 2019 (08:52 IST)
Updated Date: Sat, 13 Apr 2019 (08:53 IST)
ಬೆಂಗಳೂರು: ಪಂಚತಂತ್ರ ಸಿನಿಮಾ ಯಶಸ್ಸಿನಿಂದ ಖುಷಿಯಾಗಿರುವ ಯೋಗರಾಜ್ ಭಟ್ಟರು ಇದೀಗ ಎರಡನೇ ಭಾಗ ನಿರ್ಮಿಸಲು ಮುಂದಾಗಿದ್ದಾರೆ.
ಪಂಚತಂತ್ರ ಈಗಾಗಲೇ ಯಶಸ್ವಿಯಾಗಿ 25 ನೇ ದಿನ ಪೂರೈಸಿದ್ದು, ಇದೀಗ ಎರಡನೇ ಭಾಗಕ್ಕೆ ಸಿದ್ಧತೆ ನಡೆದಿದೆಯಂತೆ. ಈ ಬಾರಿ ದೊಡ್ಡ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಮಾಡಲು ಭಟ್ಟರು ತಯಾರಿ ನಡೆಸಿದ್ದಾರೆ.
ಏಕಕಾಲಕ್ಕೆ ಬಹುಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾಗಲಿದ್ದು, ಖ್ಯಾತ ನಟನನ್ನೇ ನಾಯಕನಾಗಿ ಆಯ್ಕೆ ಮಾಡುವ ಬಗ್ಗೆ ಭಟ್ಟರು ಚಿಂತನೆ ನಡೆಸಿದ್ದಾರೆ. ರೇಸ್ ಹಿನ್ನಲೆಯ ಕತೆಯನ್ನೊಳಗೊಂಡ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ತೆಲುಗಿನಲ್ಲೂ ರಿಮೇಕ್ ಆಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ