Webdunia - Bharat's app for daily news and videos

Install App

ಎಲ್ಲಿದ್ದೆ ಇಲ್ಲಿತನಕ: ಇದು ಸೃಜಾ ಕೆರಿಯರ್ನಲ್ಲೇ ಸ್ಪೆಷಲ್ ಸಿನಿಮಾ!

Webdunia
ಗುರುವಾರ, 10 ಅಕ್ಟೋಬರ್ 2019 (18:27 IST)
ಲೋಕೇಶ್ ಅವರು ನಟಿಸಿದ್ದ ಎಲ್ಲಿಂದಲೋ ಬಂದವರು ಚಿತ್ರದಲ್ಲಿ `ಎಲ್ಲಿದ್ದೆ ಇಲ್ಲಿತನಕ ಎಲ್ಲಿಂದ ಬಂದ್ಯವ್ವ’ ಎಂಬ ಹಾಡು ಕನ್ನಡ ಚಿತ್ರಪ್ರೇಮಿಗಳ ಮನಸಲ್ಲಿ ಎಂದಿಗೂ ಹಸಿರಾಗಿರುತ್ತದೆ. ಒಂದೂ ಮರೆಯದ ಎವರ್ಗ್ರೀನ್ ಹಾಡುಗಳಲ್ಲಿ ಅದೂ ಕೂಡಾ ಸ್ಥಾನ ಪಡೆದುಕೊಂಡಿದೆ.

ಇದೀಗ ಲೋಕೇಶ್ ಪುತ್ರ ಸೃಜನ್ ಲೋಕೇಶ್ ಆ ಪ್ರಸಿದ್ಧ ಹಾಡಿನ ಸಾಲನ್ನೇ ಶೀರ್ಷಿಕೆಯಾಗಿಸಿಕೊಂಡಿರೋ `ಎಲ್ಲಿದ್ದೆ ಇಲ್ಲಿತನಕ’ ಇದೇ ತಿಂಗಳ 11ರಂದು ಬಿಡುಗಡೆಗೆ ರೆಡಿಯಾಗಿದೆ. ಈ ಸಿನಿಮಾ ಇಂದು ಭಾರೀ ನಿರೀಕ್ಷೆ ಹುಟ್ಟಿಸಿರೋದಕ್ಕೆ ಹತ್ತಾರು ಕಾರಣಗಳಿವೆ.
ಮಜಾ ಟಾಕೀಸ್ ಶೋ ಮೂಲಕವೇ ಭಾರೀ ಪ್ರಸಿದ್ಧಿ ಪಡೆದುಕೊಂಡಿರುವವರು ಸೃಜನ್ ಲೋಕೇಶ್. ಕನ್ನಡದ ಮಟ್ಟಿಗೆ ಕಿರುತೆರೆ ಪ್ರೇಕ್ಷಕರಿಗೆ ಹೊಸಾ ಅನುಭವ ನೀಡಿದ, ವರ್ಷಾಂತರಗಳ ಕಾಲ ಮಸ್ತ್ ಮಜಾ ಕೊಟ್ಟ ಈ ಶೋನ ಕ್ರಿಯೇಟಿವ್ ಡೈರೆಕ್ಟರ್ ಆಗಿದ್ದವರು ತೇಜಸ್ವಿ. ಅವರೇ ಎಲ್ಲಿದ್ದೆ ಇಲ್ಲಿತನಕ ಚಿತ್ರದ ನಿರ್ದೇಶನವನ್ನೂ ಮಾಡಿದ್ದಾರೆ. ಹಲವಾರು ವರ್ಷಗಳ ಕಾಲ ಸೃಜನ್ ಒಡನಾಡಿಯಾಗಿದ್ದುಕೊಂಡು ಯಶಸ್ವೀ ಶೋಗಳನ್ನು ನಿರ್ದೇಶನ ಮಾಡಿರುವ ತೇಜಸ್ವೀ ಈ ಸಿನಿಮಾವನ್ನು ಸೃಜನ್ ಕೆರಿಯರ್ನಲ್ಲಿಯೇ ಸ್ಪೆಷಲ್ ಮೂವಿಯಾಗಿ ದಾಖಲಾಗುವಂತೆ ನಿದೇಶನ ಮಾಡಿದ್ದಾರಂತೆ. ಈಗಾಗಲೇ ಹಾಡುಗಳು ಮತ್ತು ಟ್ರೇಲರ್ ಮೂಲಕ ಅದರ ಸ್ಪಷ್ಟ ಸುಳಿವು ಜಾಹೀರಾಗಿದೆ. ಇದರೊಂದಿಗೇ ಎಲ್ಲಿದ್ದೆ ಇಲ್ಲಿತನಕ ಭರವಸೆಯ ಚಿತ್ರವಾಗಿಯೂ ಹೊರಹೊಮ್ಮಿದೆ.
ಇನ್ನುಳಿದಂತೆ ಮಜಾ ಟಾಕೀಸ್ನ ಯಶಸ್ವೀ ತಂಡವೇ ಈ ಸಿನಿಮಾ ರೂಪಿಸೋದರಲ್ಲಿಯೂ ಪ್ರಧಾನ ಪಾತ್ರ ವಹಿಸಿದೆ. ಈ ಮೂಲಕ ಮತ್ತೊಂದು ಪ್ರತಿಭಾವಂತರ ತಂಡ ಕಿರುತೆರೆಯಿಂದ ಹಿರಿತೆರೆಗೆ ಪಾದಾರ್ಪಣೆ ಮಾಡಿದಂತಾಗಿದೆ.

ಸೃಜನ್ ಲೋಕೇಶ್ ಅಟವರಿಗೆ ಸೂಟ್ ಆಗುವ, ಮನೋರಂಜನೆಯೇ ಪ್ರಧಾನವಾದರೂ ಎಲ್ಲ ಅಂಶಗಳನ್ನು ಒಳಗೊಂಡಿರುವ ಕಥೆಯೊಂದಿಗೆ ಈ ಸಿನಿಮಾ ಮೂಡಿ ಬಂದಿದೆ. ಲೋಕೇಶ್ ಪ್ರೊಡಕ್ಷನ್ಸ್ ಮೂಲಕವೇ ಅದ್ದೂರಿಯಾಗಿ ನಿರ್ಮಾಣಗೊಂಡಿರೋ ಈ ಚಿತ್ರ ಇದೇ ತಿಂಗಳ 11ರಂದು ಬಿಡುಗಡೆಯಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಈಕೆಯಾ ಮಹಾಕುಂಭಮೇಳದ ವೈರಲ್ ಹುಡುಗಿ ಅನ್ನುವಷ್ಟರ ಮಟ್ಟಿಗೆ ಬದಲಾದ ಮೊನಲಿಸಾ, Video

Mysore Sandal Soap: ತಮನ್ನಾ ಭಾಟಿಯಾರನ್ನು ವಜಾಗೊಳಿಸುವಂತೆ ಹೆಚ್ಚಿದ ಒತ್ತಾಯ

Actor Darshan: ಪವಿತ್ರಾ ಗೌಡ ಹೊಸ ಸ್ಟೇಟಸ್ ಹಿಂದಿನ ಟಾರ್ಗೆಟ್ ಯಾರು

Madenur Manu: ಗಂಡನ ಮೇಲೆ ಬಂದಿರುವ ರೇಪ್ ಕೇಸ್ ಬಗ್ಗೆ ಮಡೆನೂರು ಮನು ಪತ್ನಿ ಶಾಕಿಂಗ್ ಹೇಳಿಕೆ

ಥಿಯೇಟರ್‌ನಲ್ಲಿ ಗಂಡನನ್ನು ನೆನೆದು ಕಣ್ಣೀರು ಹಾಕಿದ ಮಡೆನೂರು ಮನು ಪತ್ನಿ, ಹೇಳಿದ್ದೇನು ಗೊತ್ತಾ

ಮುಂದಿನ ಸುದ್ದಿ
Show comments