Select Your Language

Notifications

webdunia
webdunia
webdunia
webdunia

ಅಪ್ಪ-ಅಮ್ಮನ ಹಳೇ ಫೋಟೋ ಬಳಸಿ ಎಲ್ಲಿದ್ದೆ ಇಲ್ಲಿ ತನಕ ಪೋಸ್ಟರ್ ಮಾಡಿದ ಸೃಜನ್ ಲೋಕೇಶ್

ಅಪ್ಪ-ಅಮ್ಮನ ಹಳೇ ಫೋಟೋ ಬಳಸಿ ಎಲ್ಲಿದ್ದೆ ಇಲ್ಲಿ ತನಕ ಪೋಸ್ಟರ್ ಮಾಡಿದ ಸೃಜನ್ ಲೋಕೇಶ್
ಬೆಂಗಳೂರು , ಬುಧವಾರ, 11 ಸೆಪ್ಟಂಬರ್ 2019 (09:19 IST)
ಬೆಂಗಳೂರು: ತಮ್ಮ ಹೋಂ ಬ್ಯಾನರ್ ಲೋಕೇಶ್ ಪ್ರೊಡಕ್ಷನ್ ನಡಿಯಲ್ಲಿ ನಿರ್ಮಿಸಿ ನಟಿಸುತ್ತಿರುವ ಎಲ್ಲಿದ್ದೆ ಇಲ್ಲಿ ತನಕ ಸಿನಿಮಾ ಪೋಸ್ಟರ್ ನ್ನು ಸೃಜನ್ ಲೋಕೇಶ್ ವಿಶಿಷ್ಟವಾಗಿ ತಯಾರಿಸಿದ್ದಾರೆ.


ತಮ್ಮ ತಂದೆ, ಹಿರಿಯ ನಟ ಲೋಕೇಶ್ ಮತ್ತು ಪತ್ನಿ ಗಿರಿಜಾ ಲೋಕೇಶ್ ಅವರ ಹಳೆಯ ಸುಂದರ ಕ್ಷಣದ ಫೋಟೋ ಜತೆಗೆ ತಮ್ಮ ಮತ್ತು ನಾಯಕಿ ಹರಿಪ್ರಿಯಾ ಅದೇ ಭಂಗಿಯಲ್ಲಿ ನಿಂತಿರುವ ಫೋಟೋ ಕೊಲೇಜ್ ಮಾಡಿ ಪೋಸ್ಟರ್ ತಯಾರಿಸಿದ್ದಾರೆ.

ಈ ಪೋಸ್ಟರ್ ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಒಂದು ರಿಯಲ್ ಜೋಡಿ ಜತೆಗೆ ರೀಲ್ ಜೋಡಿ ತುಂಬಾ ಚೆನ್ನಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈಗಾಗಲೇ ಎಲ್ಲಿದ್ದೆ ಇಲ್ಲಿ ತನಕ ಹಾಡುಗಳು ಬಿಡುಗಡೆಯಾಗುತ್ತಿದ್ದು, ಹಿಟ್ ಆಗಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆ ದಿನಾಂಕ ಘೋಷಿಸಲಾಗುತ್ತದೆ ಎಂದು ಸೃಜನ್ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗನ್ ಹಿಡಿದ ರಮೇಶ್ ಅರವಿಂದ್! ಶಿವಾಜಿ ಸುರತ್ಕಲ್ ಟೀಸರ್ ನೋಡಿ ಪ್ರೇಕ್ಷಕರಿಗೆ ಅಚ್ಚರಿ