Select Your Language

Notifications

webdunia
webdunia
webdunia
webdunia

ಗನ್ ಹಿಡಿದ ರಮೇಶ್ ಅರವಿಂದ್! ಶಿವಾಜಿ ಸುರತ್ಕಲ್ ಟೀಸರ್ ನೋಡಿ ಪ್ರೇಕ್ಷಕರಿಗೆ ಅಚ್ಚರಿ

ಗನ್ ಹಿಡಿದ ರಮೇಶ್ ಅರವಿಂದ್! ಶಿವಾಜಿ ಸುರತ್ಕಲ್ ಟೀಸರ್ ನೋಡಿ ಪ್ರೇಕ್ಷಕರಿಗೆ ಅಚ್ಚರಿ
ಬೆಂಗಳೂರು , ಬುಧವಾರ, 11 ಸೆಪ್ಟಂಬರ್ 2019 (09:13 IST)
ಬೆಂಗಳೂರು: ರಮೇಶ್ ಅರವಿಂದ್ ಹೆಚ್ಚಾಗಿ ಕೌಟುಂಬಿಕ ಪಾತ್ರಗಳಲ್ಲೇ ಮಿಂಚಿದವರು. ಸಾಮಾನ್ಯವಾಗಿ ಅವರು ಫೈಟಿಂಗ್ ದೃಶ್ಯಗಳಿಂದ ದೂರವೇ ಇರುತ್ತಾರೆ. ಆದರೆ ಶಿವಾಜಿ ಸುರತ್ಕಲ್ ಸಿನಿಮಾ ಟೀಸರ್ ನಲ್ಲಿ ರಮೇಶ್ ಲುಕ್ ನೋಡಿ ಪ್ರೇಕ್ಷಕರಿಗೇ ಅಚ್ಚರಿಯಾಗಿದೆ.


ರಮೇಶ್ ಅರವಿಂದ್ ಇದುವರೆಗೆ ಕಾಣಿಸಿಕೊಂಡಿದ್ದಕ್ಕಿಂತ ಭಿನ್ನ ಪಾತ್ರವಿದು ಎಂಬುದು ಈ ಟೀಸರ್ ನೋಡಿದರೇ ಗೊತ್ತಾಗುತ್ತದೆ. ಟೀಸರ್ ನಲ್ಲಿ ರಮೇಶ್ ಗನ್ ಹಿಡಿದು ಫೈಟ್ ಮಾಡುತ್ತಾರೆ, ಪತ್ತೇದಾರಿಕೆ ಮಾಡುತ್ತಾರೆ, ಒಂದು ಕೊಲೆ ರಹಸ್ಯ ಬೇಧಿಸಲು ಹೊರಟಿದ್ದಾರೆ.

ಇಂತಹದ್ದೊಂದು ವಿಭಿನ್ನ ಪಾತ್ರದ ಟೀಸರ್ ನಿನ್ನೆ ಬಿಡುಗಡೆಯಾಗಿದ್ದು, ಟೀಸರ್ ನೋಡಿದ ವೀಕ್ಷಕರು ಈ ಇಂಟರೆಸ್ಟಿಂಗ್ ಆಗಿದ್ದು, ಚಿತ್ರ ವೀಕ್ಷಿಸಲು ಕುತೂಹಲವಾಗುತ್ತಿದೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಂಡು ಮಗುವಿಗೆ ತಾಯಿಯಾದ ನಟಿ ಶ್ವೇತಾ ಚಂಗಪ್ಪ