Publish Date: Sun, 17 Apr 2022 (18:49 IST)
Updated Date: Sun, 17 Apr 2022 (18:51 IST)
ಬೆಂಗಳೂರು: ಕೆಜಿಎಫ್ 2 ಯಶಸ್ಸಿನ ಬಳಿಕ ಇದೀಗ ಟ್ವಿಟರಿಗರು ರಾಕಿಂಗ್ ಸ್ಟಾರ್ ಯಶ್ ಮತ್ತು ಇತರ ಪ್ಯಾನ್ ಇಂಡಿಯಾ ಸ್ಟಾರ್ ಗಳಿಗೆ ಹೋಲಿಕೆ ಶುರು ಮಾಡಿದ್ದಾರೆ.
ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಪ್ಯಾನ್ ಇಂಡಿಯಾ ಸಿನಿಮಾ ಆರ್ ಆರ್ ಆರ್ ನಾಯಕ ರಾಮ್ ಚರಣ್ ತೇಜ್ ಮತ್ತು ಕೆಜಿಎಫ್ 2 ನಾಯಕ ರಾಕಿಂಗ್ ಸ್ಟಾರ್ ಯಶ್ ಫ್ಯಾನ್ಸ್ ಇದೀಗ ಇಬ್ಬರ ನಡುವೆ ಹೋಲಿಕೆ ಮಾಡಿದ್ದಾರೆ.
ಟ್ವಿಟರಿಗರು ಇಬ್ಬರ ಈ ಸಿನಿಮಾಗಳ ಪಾತ್ರಗಳ ಪೈಕಿ ಯಾವುದು ಬೆಸ್ಟ್ ಎಂದು ಪೈಪೋಟಿ ನಡೆಸಿದ್ದಾರೆ. ಬಾಕ್ಸ್ ಆಫೀಸ್ ವಿಚಾರದಲ್ಲಿ ಆರ್ ಆರ್ ಆರ್ ಸಿನಿಮಾವನ್ನೂ ಕೆಜಿಎಫ್ ಮೀರಿಸಿದೆ. ಆದರೆ ಇಬ್ಬರೂ ಸ್ಟಾರ್ ಗಳಿಗೆ ಅಭಿಮಾನಿ ಬಳಗವೇನೂ ಕಡಿಮೆಯಲ್ಲ. ಹೀಗಾಗಿ ಕೆಲವರು ಪೈಪೋಟಿ ನಡೆಸಿದ್ದರೆ ಮತ್ತೆ ಕೆಲವರು ಇಬ್ಬರ ನಡುವಿನ ಸ್ನೇಹ ನೆನಪಿಸಿ ಸ್ಪರ್ಧೆ ಬೇಡ ಎಂದಿದ್ದಾರೆ.