ಕೆಜಿಎಫ್ 1 ಪ್ರೀಮಿಯರ್ ಶೋ: ತೆಲುಗಿನಲ್ಲೇ ಪ್ರಚಾರ ಮಾಡಿದ ಯಶ್, ಫಿದಾ ಆದ ಫ್ಯಾನ್ಸ್

ಶನಿವಾರ, 4 ಜುಲೈ 2020 (10:51 IST)
ಬೆಂಗಳೂರು: ಸ್ಯಾಂಡಲ್ ವುಡ್ ಮಾತ್ರವಲ್ಲದೆ ದೇಶವಿಡೀ ಧೂಳೆಬ್ಬಿಸಿದ ಕೆಜಿಎಫ್ 1 ಸಿನಿಮಾದ ತೆಲುಗು ಅವತರಣಿಕೆ ನಾಳೆ ಸ್ಟಾರ್ ಮಾ ವಾಹಿನಿಯಲ್ಲಿ ಮೊದಲ ಬಾರಿಗೆ ಪ್ರಸಾರವಾಗಲಿದೆ.


ಇತ್ತೀಚೆಗಷ್ಟೇ ಸ್ಟಾರ್ ಮಾ ವಾಹಿನಿ ದಾಖಲೆಯ ಮೊತ್ತಕ್ಕೆ ಕೆಜಿಎಫ್ 1 ಸಿನಿಮಾದ ಹಕ್ಕು ಖರೀದಿ ಮಾಡಿತ್ತು. ನಾಳೆ 5.30 ಕ್ಕೆ ಸಿನಿಮಾ ಪ್ರಸಾರವಾಗುತ್ತಿರುವುದರ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತೆಲುಗಿನಲ್ಲೇ ಪ್ರಚಾರ ಮಾಡಿದ್ದಾರೆ.

ಯಶ್ ತೆಲುಗು ಭಾಷೆ ಮಾತನಾಡಿ ಸಿನಿಮಾ ನೋಡಲು ಮನವಿ ಮಾಡಿರುವುದನ್ನು ನೋಡಿ ಪ್ರೇಕ್ಷಕರೂ ಖುಷಿಯಾಗಿದ್ದಾರೆ. ಕೆಜಿಎಫ್ ಸಿನಿಮಾ ಬಳಿಕ ಬೇರೆ ಭಾಷೆಗಳಲ್ಲೂ ಯಶ್ ಗೆ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಹೀಗಾಗಿ ಆ ಭಾಷೆಯಲ್ಲಿಯೇ ಮಾತನಾಡಿ ಅವರನ್ನು ಖುಷಿಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಗಲ್ವಾನ್ ಕಣಿವೆ ಸಂಘರ್ಷದ ಬಗ್ಗೆ ಸಿನಿಮಾ ಮಾಡಲಿರುವ ನಟ ಅಜಯ್ ದೇವಗನ್