Select Your Language

Notifications

webdunia
webdunia
webdunia
webdunia

ಕಾನ್‌ ಫಿಲ್ಮ್‌ ಫೆಸ್ಟಿವೆಲ್‌ನಲ್ಲಿ ಪ್ರಶಸ್ತಿ ಬಾಚಿಕೊಂಡ ಮೈಸೂರಿನ ಚಿದಾನಂದರನ್ನು ಅಭಿನಂದಿಸಿದ ರಾಕಿಂಗ್‌ ಸ್ಟಾರ್‌ ಯಶ್

director chidananda

sampriya

ಬೆಂಗಳೂರು , ಶುಕ್ರವಾರ, 24 ಮೇ 2024 (19:43 IST)
Photo By X
ಬೆಂಗಳೂರು: ಮೈಸೂರಿನ ಚಿದಾನಂದ ನಾಯ್ಕ್ ನಿರ್ದೇಶನದ  ‘ಸನ್ ಫ್ಲವರ್ಸ್ ವರ್ ದ ಫಸ್ಟ್ ಒನ್ಸ್ ಟು ನೋ’ ಕಿರುಚಿತ್ರ ಕಾನ್ ಫಿಲ್ಮ್ ಫೆಸ್ಟಿವೆಲ್‌ನಲ್ಲಿ  ಪ್ರಥಮ ಬಹುಮಾನ ಪಡೆಯುವ ಮೂಲಕ ಕರ್ನಾಟಕಕ್ಕೆ ಹೆಮ್ಮೆ ತಂದಿದ್ದಾರೆ.

ವಿಶೇಷ ಏನೆಂದರೆ ಈ ಫೆಸ್ಟಿವೆಲ್‌ಗೆ ಆಯ್ಕೆಯಾದ ಮೊದಲ ಕನ್ನಡಿಗರ ಕಿರುಚಿತ್ರ ಇದಾಗಿದ್ದು, ಇದೀಗ ಬಹುಮಾನ ಬಾಚಿಕೊಂಡ ಚಿದಾನಂದ ಅವರ ಸಾಧನೆಗೆ ರಾಕಿಂಗ್‌ ಸ್ಟಾರ್‌ ಯಶ್‌ ಹಾಡಿ ಹೊಗಳಿದ್ದಾರೆ.

ಎಕ್ಸ್‌ನಲ್ಲಿ ಫೋಟೋ ಹಾಕಿ ಬರೆದುಕೊಂಡಿರುವ ಯಶ್‌ ಅವರು, @ Chidanandasnaik ಅವರಿಗೆ ಅಭಿನಂದನೆಗಳು
ಕಾನ್‌ನಲ್ಲಿ ಅತ್ಯುತ್ತಮ ಕಿರುಚಿತ್ರಕ್ಕಾಗಿ ಲಾ ಸಿನೆಫ್ ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ 'ಸನ್‌ಫ್ಲವರ್ಸ್‌ ವೇರ್ ದಿ ಫಸ್ಟ್ ಒನ್ಸ್ ಟು ನೋ'!
ನೀವು ಕನ್ನಡ ಜಾನಪದವನ್ನು ಜಾಗತಿಕ ಹಂತಕ್ಕೆ ಕೊಂಡೊಯ್ಯುವುದನ್ನು ಮತ್ತು ಭಾರತೀಯ ಚಿತ್ರರಂಗಕ್ಕೆ ಹೊಸ ಮಾನದಂಡಗಳನ್ನು ಹೊಂದಿಸುವುದನ್ನು ನೋಡಲು ಹೆಮ್ಮೆಪಡುತ್ತೇನೆ! ಎಂದು ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೋಲ್ಡನ್‌ ವೀಸಾ ಪಡೆದ ಬೆನ್ನಲ್ಲೇ ಅಬುಧಾಬಿಯ ಹಿಂದೂ ದೇವಾಲಯಕ್ಕೆ ಸೂಪರ್‌ ಸ್ಟಾರ್‌ ರಜನಿಕಾಂತ್‌ ಭೇಟಿ