ಬಿಗ್‌ಬಾಸ್‌ ಮನೆಗೆ ಕಾಲಿಡುತ್ತಾರಾ ಅನುಶ್ರೀ ಗಂಡ ರೋಷನ್‌, ಹೀಗೊಂದು ಪೋಸ್ಟ್ ವೈರಲ್

Sampriya
ಭಾನುವಾರ, 14 ಸೆಪ್ಟಂಬರ್ 2025 (12:28 IST)
Photo Credit X
ಬೆಂಗಳೂರು: ಕನ್ನಡ ಕಿರುತೆರೆ ಲೋಕದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 12 ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ದೊಡ್ಮನೆಗೆ ಎಂಟ್ರಿ ಕೊಡುವ ಸಂಭವನೀಯ ಅಭ್ಯರ್ಥಿಗಳ ಲಿಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ಈ ನಡುವೆ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರ ಪತಿ ರೋಷನ್ ಅವರು ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆಂಬ  ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ಇನ್ನೂ ಜೀ ಕನ್ನಡದಲ್ಲಿ ಶನಿವಾರ ಪ್ರಸಾರವಾದ ಮಹಾನಟಿ ಕಾರ್ಯಕ್ರಮದಲ್ಲಿ ಅನುಶ್ರೀಗೆ ಮಡಿಲು ತುಂಬುವ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ಪತಿ ರೋಷನ್‌ರನ್ನು ಅನುಶ್ರೀ ಮಿಸ್ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಮದುವೆ ಬ್ಯುಸಿಯಲ್ಲಿ ರೋಷನ್ ತಮ್ಮ ಬಿಸಿನೆಸ್ ಕಡೆ ಹೆಚ್ಚು ಗಮನಕೊಡಲು ಆಗಲಿಲ್ಲ. ಹಾಗಾಗಿ ಅವರು ವೇದಿಕೆಗೆ ಬಂದಿಲ್ಲ ಎಂದು ಹೇಳಿಕೊಂಡಿದ್ದರು. ಹೀಗಿರುವಾಗ ರೋಷನ್ ಅವರು ಬಿಗ್‌ಬಾಸ್ ಮನೆಗೆ ಹೋಗುವುದು ಎಷ್ಟು ಸತ್ಯ ಎಂದು ತಿಳಿದುಬರಬೇಕಿದೆ.

ಹರಿದಾಡುತ್ತಿರುವ ಪೋಸ್ಟ್‌ನಲ್ಲಿ ಹೀಗಿದೆ: 

ಕೊಡಗಿನ ಹುಡುಗ ಅನುಶ್ರೀ ಗಂಡ ರೋಷನ್ ಅವರು ಬಿಗ್ ಬಾಸ್ ಮನೆಗೆ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಕೇಳಿ ಬರುತ್ತಿದೆ. ಇತ್ತೀಚೆಗೆ ಮದುವೆಯಾದ ಈ ಜೋಡಿ ದೇಶ ವಿದೇಶಗಳನ್ನು‌‌ ಸುತ್ತಾಡುವ ಬದಲು ಇದೀಗ ತಮ್ಮತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಇದೀಗ ಬಿಗ್ ಬಾಸ್ ಮನೆ ಕಡೆ ಅನುಶ್ರೀ ಗಂಡ ರೋಷನ್ ಅವರು ಮುಖ ಮಾಡಿದ್ದಾರೆ ಎಂಬ ಗುಸುಗುಸು ಎದ್ದಿದೆ. <>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬೆಳಕಿಲ್ಲದ ದೀಪಾವಳಿಯೊಂದಿಗೆ ನಟ ದರ್ಶನ್‌ಗೆ ಬೆನ್ನು ನೋವಿನ ಸಂಕಟ

ದೇವರ ಮಕ್ಕಳಿಗೆ ದೀಪಾವಳಿಗೆ ಸರ್ಪ್ರೈಸ್ ನೀಡಿದ ಸಮಂತಾ ರುತ್ ಪ್ರಭು

ಹೊಸ ಅಧ್ಯಾಯ ಪ್ರಾರಂಭವಾಗುತ್ತಿದೆ: ದೀಪಾವಳಿ ದಿನ ಗುಡ್‌ನ್ಯೂಸ್ ಹಂಚಿಕೊಂಡ ರಶ್ಮಿ ಪ್ರಭಾಕರ್

ಕಾಂತಾರ ಸಕ್ಸನ್‌ ಬೆನ್ನಲ್ಲೇ ಬಿಹಾರದ ಪವರ್‌ಫುಲ್‌ ದೇಗುಲಕ್ಕೆ ಡಿವೈನ್‌ ಸ್ಟಾರ್‌ ರಿಷಭ್‌ ಶೆಟ್ಟಿ ಭೇಟಿ

ಮೊದಲ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಎಂಟ್ರಿ ಕೊಟ್ಟ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಇವರೇ

ಮುಂದಿನ ಸುದ್ದಿ
Show comments