ಗ್ಯಾಂಗ್‌ಸ್ಟರ್‌ ಕುರಿತ ವಿವಾದಾತ್ಮಕ ವಿಡಿಯೊ ಹಂಚಿಕೆ: ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ಸಂಕಷ್ಟ

Sampriya
ಭಾನುವಾರ, 14 ಸೆಪ್ಟಂಬರ್ 2025 (11:24 IST)
Photo Credit X
ಇಂದೋರ್: ಗ್ಯಾಂಗ್‌ಸ್ಟರ್ ಸಲ್ಮಾನ್ ಲಾಲಾ ಕುರಿತ ವಿವಾದಾತ್ಮಕ ವಿಡಿಯೊವೊಂದನ್ನು ಬಿಗ್ ಬಾಸ್  ಖ್ಯಾತಿಯ ನಟ ಅಜಾಜ್ ಖಾನ್  ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. 

ಇಂದೋರ್‌ ಕ್ರೈಮ್ ಬ್ರಾಂಚ್ ಅಜಾಜ್ ಖಾನ್‌ಗೆ ಸೂಚನೆ ಜಾರಿಗೊಳಿಸಿದ್ದು, ಆತನ ಇನ್‌ಸ್ಟಾಗ್ರಾಮ್ ಖಾತೆಯನ್ನು ನಿರ್ಬಂಧಿಸಲು ಪತ್ರ ಬರೆದಿದೆ. ಅಲ್ಲದೆ, ಇಂದೋರ್‌ನ ಇರ್ಶಾದ್ ಹಕೀಮ್ ದೂರು ದಾಖಲಿಸಿದ್ದು, ಅಜಾದ್ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಅಜಾಜ್ ಖಾನ್ ಇನ್‌ಸ್ಟಾಗ್ರಾಮ್‌ನಲ್ಲಿ ಸಲ್ಮಾನ್ ಲಾಲಾ ಮರಣದ ಬಗ್ಗೆ ವಿಡಿಯೋ ಪೋಸ್ಟ್ ಮಾಡಿದ್ದರು. ಲಾಲಾ ಕೆರೆಯಲ್ಲಿ ಮುಳುಗಿ ಸತ್ತಿದ್ದಾನೆ ಎನ್ನುತ್ತಾರೆ. ಆದರೆ ಆತ ಉತ್ತಮ ಈಜುಗಾರ. ಸಮುದ್ರದಲ್ಲಿ ಈಜುವ ಗ್ಯಾಂಗ್‌ಸ್ಟರ್ ಕೆರೆಯಲ್ಲಿ ಮುಳುಗುವುದಿಲ್ಲ. ಆತನ ಧರ್ಮದ ಕಾರಣಕ್ಕೆ ಕೊಲೆಯಾದನು ಎಂದು ಆರೋಪಿಸಿದ್ದರು. 

ಈ ಹೇಳಿಕೆಯು ಸಾಮುದಾಯಿಕ ದ್ವೇಷವನ್ನು ಉತ್ತೇಜಿಸುತ್ತದೆ ಎಂದು ಇಂದೋರ್‌ನ ಇರ್ಶಾದ್ ಹಕೀಮ್ ದೂರು ದಾಖಲಿಸಿದ್ದರು. ವಿಡಿಯೊ ವಿವಾದ ಆಗುತ್ತಿದ್ದರೆ ಅಜಾಜ್ ಖಾನ್ ಕ್ಷಮಾಪಣೆ ವಿಡಿಯೋ ಬಿಡುಗಡೆ ಮಾಡಿದ್ದಾರೆ.

ಲಾಲಾ ಇನ್‌ಫ್ಲೂಯೆನ್ಸರ್ ಎಂದು ತಿಳಿದು ವಿಡಿಯೋ ಹಂಚಿದೆ. ಆತನ ಕ್ರಿಮಿನಲ್ ಹಿನ್ನೆಲೆ ತಿಳಿಯಲಿಲ್ಲ. ಸತ್ಯ ಗೊತ್ತಾದ ತಕ್ಷಣ ಪೋಸ್ಟ್ ತೆಗೆದುಹಾಕಿದೆ. ಈ ತಪ್ಪಿಗೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ. ಆದರೆ, ಇಂದೋರ್‌ ಕ್ರೈಮ್ ಬ್ರಾಂಚ್ ತನಿಖೆಯನ್ನು ತೀವ್ರಗೊಳಿಸಿದ್ದು, ಅಜಾಜ್ ಖಾನ್‌ರನ್ನು ವಿಚಾರಣೆಗೆ ಹಾಜರಾಗಲು ಸೂಚಿಸಿದೆ. <>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹಿರಿಯ ನಟ ಉಮೇಶ್ ಚಿಕಿತ್ಸೆಗೆ ನೆರವಾಗಲು ಮುಖ್ಯಮಂತ್ರಿಗಳಿಗೇ ಪತ್ರ ಬರೆದ ಸಚಿವ ತಂಗಡಗಿ

ರಿಷಬ್ ಶೆಟ್ಟಿ ರೊಮ್ಯಾನ್ಸ್ ಸೀನ್ ಮಾಡುವಾಗ ಇದೊಂದು ಕಾರಣಕ್ಕೆ ಮಾನಿಟರ್ ಮುಂದಿರುತ್ತಾರಂತೆ ಪ್ರಗತಿ

ಕನ್ನಡ ಅಂತ ಬಂದ್ರೆ ನನ್ನ ಶೇಕ್ ಮಾಡಕ್ಕಾಗಲ್ಲ ಎಂದ ಅಶ್ವಿನಿ ಗೌಡ: ಕರ್ನಾಟಕ ರತ್ನ ಬಿಡಮ್ಮಾ ಎಂದ ನೆಟ್ಟಿಗರು

ಕರುನಾಡಿನಲ್ಲಿ ಹೊಸ ದಾಖಲೆ ಬರೆದ ಕಾಂತಾರ: ವಿವಿಧ ಭಾಷೆಗಳ ಕಲೆಕ್ಷನ್‌ನ ಮಾಹಿತಿ ಇಲ್ಲಿದೆ

ವೈಲ್ಡ್ ಕಾರ್ಡ್ ಸ್ಪರ್ಧಿಯ ಮಾತಿಗೆ ನೊಂದು ಬಿಕ್ಕಿ ಬಿಕ್ಕಿ ಅತ್ತ ಜಾಹ್ನವಿ

ಮುಂದಿನ ಸುದ್ದಿ
Show comments