ಬೆಂಗಳೂರು: ಕನ್ನಡ ಖ್ಯಾತ ನಟಿ ಅನುಶ್ರೀ ಅವರು ತಮ್ಮ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಟ್ಟಿದ್ದಾರೆ. ನಗರದ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ಸಾಂಪ್ರದಾಯಿಕ ಸಮಾರಂಭದಲ್ಲಿ ಉದ್ಯಮಿ ರೋಷನ್ ಅವರನ್ನು ಅನುಶ್ರೀ ಕೈಹಿಡಿದರು.
ಇದೀಗ ಸಾಮಾಜಿಕ ಜಾಲತಾಣದಲ್ಲಿ ನಟಿ ಅನುಶ್ರೀ ಮದುವೆ ಕ್ಷಣದ ವಿಡಿಯೋ ತುಣುಕುಗಳು ವೈರಲ್ ಆಗಿದೆ. ಅಕ್ಕ ಹಾಗೂ ಭಾವನಿಗೆ ಹಾರೈಸಿದ ಸಹೋದರ, ನವಜೋಡಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.
ಬಾವ ರೋಷನ್‌ಗೆ ಚಿನ್ನದ ಚೈನ್ ಹಾಗೂ ಬ್ರಾಸ್ಲೈಟ್ ಹಾಗೂ ಅಕ್ಕ ಅನುಶ್ರೀಗೆ ಕೈಬಳೆ ಹಾಕಿದ್ದಾರೆ. ಇನ್ನೂ ರೋಷನ್‌ಗೆ ಚೈನ್ ಹಾಕಿ, ಕೈಗೆ ಬ್ರಾಸ್ಲೈಟ್ ಹಾಕಲು ಮುಂದಾದಗ ಅನುಶ್ರೀ ಶಾಕ್ ಆಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕನ್ನಡ ಸಿನಿಮಾ ರಂಗದ ಖ್ಯಾತ ನಟ ನಟಿಯರು, ಕಲಾವಿದರು ನೂತನ ಜೋಡಿಗಳಿಗೆ ಬಂದು ಹಾರೈಸಿದ್ದಾರೆ.