Publish Date: Sun, 24 Jul 2022 (08:40 IST)
Updated Date: Sun, 24 Jul 2022 (09:07 IST)
ಹೈದರಾಬಾದ್: ಲೈಗರ್ ಸಿನಿಮಾ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟ ವಿಜಯ್ ದೇವರಕೊಂಡ 199 ರೂ.ಗಳ ಸಾಮಾನ್ಯ ಹವಾಯಿ ಚಪ್ಪಲಿ ಧರಿಸಿರುವುದು ಈಗ ಎಲ್ಲೆಡೆ ಸುದ್ದಿಯಾಗಿದೆ.
ಕೋಟಿ ಕೋಟಿ ಜೇಬಿಗಿಳಿಸುವ ವಿಜಯ್ ಇಷ್ಟು ದೊಡ್ಡ ಸಿನಿಮಾದ ದೊಡ್ಡ ಕಾರ್ಯಕ್ರಮಕ್ಕೆ ಸಾಧಾರಣ ಚಪ್ಪಲಿ ಧರಿಸಿದ್ದೇಕೆ ಎಂದು ಅವರ ಡಿಸೈನರ್ ರಿವೀಲ್ ಮಾಡಿದ್ದಾರೆ.
ಲೈಗರ್ ಸಿನಿಮಾದಲ್ಲಿ ವಿಜಯ್ ಸಾಮಾನ್ಯ ಕುಟುಂಬದಿಂದ ಬರುವ ಯುವಕನ ಪಾತ್ರ ಮಾಡಿದ್ದಾರೆ. ಹೀಗಾಗಿ ತಮ್ಮ ಪಾತ್ರಕ್ಕೆ ಹತ್ತಿರವಾಗಿರುವಂತೆ ಡ್ರೆಸ್ ಮಾಡಬೇಕು ಎನ್ನುವ ಕಾರಣಕ್ಕೆ ಅವರು ಕನಿಷ್ಠ ಬೆಲೆಯ ಹವಾಯಿ ಚಪ್ಪಲಿ ಬೇಕೆಂದು ವಿನ್ಯಾಸಕರಲ್ಲಿ ಡಿಮ್ಯಾಂಡ್ ಮಾಡಿದ್ದರಂತೆ!