Select Your Language

Notifications

webdunia
webdunia
webdunia
webdunia

ನೀವು ಯಾಕೆ ಧನಂಜಯ್ ಮದುವೆಗೆ ಹೋಗಿಲ್ಲ: ಅಮೃತಾ ಅಯ್ಯಂಗಾರ್ ಪೋಸ್ಟ್‌ಗೆ ಅಭಿಮಾನಿಗಳ ಪ್ರಶ್ನೆ

Dolly Dhananjay Marriage, Actress Amrutha Iyengar, Dhananjay and Dhanyata Marriage

Sampriya

ಬೆಂಗಳೂರು , ಭಾನುವಾರ, 16 ಫೆಬ್ರವರಿ 2025 (15:30 IST)
Photo Courtesy X
ಬೆಂಗಳೂರು: ನಟ ಡಾಲಿ ಧನಂಜಯ್ ಹಾಗೂ ಡಾ.ಧನ್ಯತಾ ಅವರು ಮದುವೆ ಇಂದು ಅದ್ಧೂರಿಯಾಗಿ ನೆರವೇರಿತು. ಕುಟುಂಬಸ್ಥರು ಹಾಗೂ ಆಪ್ತ ಸ್ನೇಹಿತರ ಮಧ್ಯೆ ಧನಂಜಯ್ ಅವರು ಧನ್ಯಾತಾ ಅವರ ಕೊರಳಿಗೆ ತಾಳಿ ಕಟ್ಟಿದರು.

ಮದುವೆ ಸಮಾರಂಭದಲ್ಲಿ ಧನಂಜಯ್ ಅವರ ಸಿನಿ ರಂಗದ ಆಪ್ತರು ಭಾಗವಹಿಸಿದ್ದರು. ಆದರೆ ಧನಂಜಯ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ನಟಿ ಅಮೃತಾ ಅಯ್ಯಂಗಾರ್ ಮಾತ್ರ ಮದುವೆ ಗೈರಾಗಿದ್ದರು.

ಡಾಲಿ ಧನಂಜಯ್ ಜತೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಯಾಗಿ  ಅಮೃತಾ ಅಭಿನಯಿಸಿದ್ದರು. ರಿಯಾಲಿಟಿ ಶೋಗಳಲ್ಲೂ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಇವರಿಬ್ಬರನ್ನು ನೋಡಿದ ಗಾಂಧಿನಗರ ಮಂದಿ ಇವರಿಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎಂದು ಗುಲ್ಲಾಗಿತ್ತು. ಆದರೆ ನಾವಿಬ್ಬರು ಜಸ್ಟ್ ಫ್ರೆಂಡ್ಸ್‌ ಎಂದಿದ್ದರು.

ಇದರ ಬೆನ್ನಲ್ಲೇ ಧನಂಜಯ್ ಅವರು ಡಾ.ಧನ್ಯತಾ ಜತೆ ಮದುವೆ ಫಿಕ್ಸ್‌ ಆಯಿತು. ಧನಂಜಯ್ ಬಗ್ಗೆ ಮದುವೆ ಬಗ್ಗೆ ಪ್ರತಿಕ್ರಿಯಿಸಿದ್ದ ಅಮೃತಾ, ನನಿಗೆ ಅವರಿಬ್ಬರ ಪ್ರೀತಿ ವಿಚಾರ ಗೊತ್ತಿತ್ತು ಎಂದಿದ್ದರು.

ಧನಂಜಯ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಅಮೃತಾ ಅವರು ಮದುವೆಗೆ ಬಾರದಿದ್ದಕ್ಕೆ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ರಮ್ಯಾ ಜತೆ ತೆಗೆದ ಫೋಟೋವನ್ನು ಅಮೃತಾ ಇಂದು ಪೋಸ್ಟ್ ಮಾಡಿದ್ದಾರೆ. ಅದಕ್ಕೆ ಕೆಲವರು ನೀವು ಯಾಕೆ ಧನಂಜಯ್ ಮದುವೆಗೆ ಹೋಗಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.   ಮತ್ತೊಬ್ಬರು ಸ್ಟ್ರೇ ಸ್ಟ್ರಾಂಗ್‌ ಮೈ ಗರ್ಲ್‌ ಅಮ್ಮು, ಅಲ್‌ ದಿ ಲವ್‌ ಕಮ್ಮಿಂಗ್ ಯುವರ್ ವೇ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿ ಬಾಸ್‌ ಅಭಿಮಾನಿಗಳಲ್ಲಿ ಕಿಚ್ಚು ಹಚ್ಚಿಸಿದ ಡೆವಿಲ್‌ ಟೀಸರ್‌: ದರ್ಶನ್‌ ಖಡಕ್‌ ಡೈಲಾಗ್‌ಗೆ ಫ್ಯಾನ್ಸ್‌ ಫಿದಾ