ಉಪೇಂದ್ರ ವಿರುದ್ಧ ಟ್ವಿಟಿಗರು ಪುಲ್ ಗರಂ!

ಸೋಮವಾರ, 27 ಆಗಸ್ಟ್ 2018 (08:57 IST)
ಬೆಂಗಳೂರು : ಉಪೇಂದ್ರ ಅವರ ಪ್ರಜಾಕೀಯ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದ ಜನರು ಇದೀಗ ಉಪೇಂದ್ರ ಹಾಗೂ ಅವರ ಪ್ರಜಾಕೀಯ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.


ತಮ್ಮದೇ ಆದ ಒಂದು ಪಕ್ಷವನ್ನು ಕಟ್ಟಬೇಕು ಎಂದು ಕನಸುಕಂಡಿದ್ದ ಉಪೇಂದ್ರ ಅವರು ನಂತರ 'ಪ್ರಜಾಕೀಯ ಪಕ್ಷ'ವನ್ನು  ಕಟ್ಟಿ ಬೆಳೆಸಲು ಮುಂದಾದರು. ಇವರ  ಈ  'ಪ್ರಜಾಕೀಯ ಪಕ್ಷ'ಕ್ಕೆ ಜನರ ಬೆಂಬಲ ಕೂಡ ಸಿಕ್ಕಿತ್ತು. ಆದರೆ ಇದೀಗ  ಜನರು ಉಪೇಂದ್ರ ಅವರ ವಿರುದ್ಧ ಫುಲ್ ಗರಂ ಆಗಿದ್ದಾರೆ.


ಇದಕ್ಕೆ ಕಾರಣವೆನೆಂದರೆ ಇತ್ತೀಚೆಗಷ್ಟೆ ಪಾಕಿಸ್ತಾನದಲ್ಲಿ ನೂತನ ಪ್ರಧಾನಮಂತ್ರಿಯಾಗಿ ಇಮ್ರಾನ್ ಖಾನ್ ಅಧಿಕಾರ ಸ್ವೀಕಾರ ಮಾಡಿದ ವೇಳೆ ತಮ್ಮ ಮೊದಲ ಭಾಷಣ ಮಾಡುವಾಗ ಕೆಲವೊಂದಿಷ್ಟು ಪ್ರಜಾಕೀಯದ ರೀತಿಯ ವ್ಯವಸ್ಥೆಯ ಬಗ್ಗೆ ಮಾತನಾಡಿದ್ದರು. ಇದನ್ನು ಉಪೇಂದ್ರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು.


ಇದಕ್ಕೆ ಕೋಪಗೊಂಡ ಟ್ವಿಟಿಗರು ಪ್ರತಿನಿತ್ಯ ಅದೆಷ್ಟೋ ಸೈನಿಕರು ಪಾಕ್ ವಿರುದ್ಧ ಹೋರಾಡಿ ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಪಾಕ್ ಕಾರಣ ಅವರ ಪರ ಮಾತನಾಡುವ ಮುನ್ನ ಸ್ವಲ್ಪ ಎಚ್ಚರವಿರಲಿ ಅಂತಾ ಒಬ್ಬರು ಹೇಳಿದರೆ, ಇನ್ನು ಗಣಪತಿ ಭಟ್ ಎನ್ನುವವರು ಅಂದು ಪ್ರಜಾಕೀಯ, ಇಂದು ಪ್ರಚಾರಕೀಯ, ನಾಳೆ ಅದೆ ಹೊಲಸು ರಾಜಕೀಯ ಅಂತಾ ಕಮೆಂಟ್ ಹಾಕಿದ್ದಾರೆ. ಆದರೆ ಇದಕ್ಕೆ  ಉಪೇಂದ್ರ ಅವರು ಯಾವುದೇ ರೀತಿಯ ಕಮೆಂಟ್ ಮಾಡಿಲ್ಲ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬುಕ್ ಮೈ ಶೋ ಹಾಗೂ ಹೈದರಾಬಾದ್‌ ಮಲ್ಟಿಪ್ಲೆಕ್ಸ್‌ ಮೇಲೆ ಕಿಡಿಕಾರಿದ ನಟ ಸತೀಶ್. ಕಾರಣವೇನು ಗೊತ್ತಾ?