Publish Date: Sun, 08 Apr 2018 (06:36 IST)
Updated Date: Sun, 08 Apr 2018 (06:40 IST)
ಬೆಂಗಳೂರು : ಮನೋಜ್ ಅವರು ನಿರ್ದೇಶಿಸಿ, ನಟಿಸಿದ ‘ಓ ಪ್ರೇಮವೇ’ ಚಿತ್ರದ ನಾಯಕಿ ನಿಕ್ಕಿ ಗಲ್ರಾನಿ ಅವರ ಮೇಲೆ ಇದೀಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಅವರು ಕೋಪಗೊಂಡಿದ್ದಾರೆ.
ಕಾರಣ ‘ಓ ಪ್ರೇಮವೇ’ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಪ್ರಮೋಷನ್ ಗೆ ಬರಬೇಕಾಗಿದ್ದ ನಟಿ ನಿಕ್ಕಿ ಗಲ್ರಾನಿ ಅವರು ತಮಿಳು ಚಿತ್ರದಲ್ಲಿ ಬ್ಯುಸಿಯಾಗಿರುವುದರಿಂದ ಪ್ರಮೋಷನ್‍ಗೆ ಬರಲಾಗುತ್ತಿಲ್ಲ ಎಂದು ಹೇಳಿದ್ದಾರಂತೆ. ಇದರಿಂದಾಗಿ ಕೋಪಗೊಂಡ ಅಧ್ಯಕ್ಷ ಸಾ.ರಾ.ಗೋವಿಂದು ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,’
ಮನೋಜ್ ನಿರ್ದೇಶನದ `ಓ ಪ್ರೇಮವೇ' ಚಿತ್ರದ ಪ್ರಚಾರಕ್ಕೆ ಬಾರದೆ, ನಿರ್ಮಾಪಕರಿಗೆ ನಿಕ್ಕಿ ಸಾಕಷ್ಟು ತೊಂದರೆ ಕೊಟ್ಟಿದ್ದಾರೆ. ಫೋನ್ ಮಾಡಿ ಸಮಸ್ಯೆ ಹೇಳಿಕೊಂಡರೂ, ಚೆನ್ನೈನಲ್ಲಿ ತಮಿಳು ಚಿತ್ರದಲ್ಲಿ ಬ್ಯುಸಿಯಾಗಿದ್ದೇನೆ. ಆದ್ದರಿಂದ ಪ್ರಮೋಷನ್‍ಗೆ ಬರಲಾಗುತ್ತಿಲ್ಲ ಎಂದು ಹೇಳಿದ್ದಾರೆ. ಅವರು ಬೆಳೆದಿರುವುದು ಕನ್ನಡ ನೆಲದಲ್ಲಿ. ಈಗ ನೋಡಿದರೆ, ತಮಿಳು ಚಿತ್ರದ ಬಗ್ಗೆ ಮಾತನಾಡುತ್ತಾರೆ. ಇನ್ನು ಮುಂದೆ ಯಾವುದೇ ಚಿತ್ರವಿರಲಿ, ಆ ನಿರ್ಮಾಪಕರಿಗೆ ತೊಂದರೆ ಕೊಟ್ಟರೆ ಮಂಡಳಿ ಸೂಕ್ತ ಕ್ರಮ ಕೈಗೊಳ್ಳಲಿದೆ' ಎಂದು ಗೋವಿಂದು ಅವರು ಎಚ್ಚರಿಕೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ