Publish Date: Sat, 07 Apr 2018 (11:16 IST)
Updated Date: Sat, 07 Apr 2018 (11:20 IST)
ಬೆಂಗಳೂರು : ಸ್ಯಾಂಡಲ್‍ವುಡ್ ಅಭಿನಯ ಶಾರದೆ ಜಯಂತಿ ಅವರು ಉಸಿರಾಟದ ತೊಂದರೆಯಿಂದ ಅಸ್ವಸ್ಥರಾಗಿದ್ದ ಕಾರಣ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶುಕ್ರವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಮಾರ್ಚ್ 26 ಸೋಮವಾರ ಅವರು ಅಸ್ವಸ್ಥರಾಗಿದ್ದು, ಸುಮಾರು ಬೆಳಗ್ಗೆ 11 ಗಂಟೆಗೆ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದ್ದರೂ ಕೂಡ ಅವರ ಬಗ್ಗೆ ಇಲ್ಲಸಲ್ಲದ ರೂಮರ್ಸ್ ಗಳು ಕೇಳಿಬಂದಿದ್ದವು. ಆದರೆ ಇದೀಗ ಅವರು ಚೇರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದಾರೆ.
ವಿಕ್ರಂ ಆಸ್ಪತ್ರೆಯಲ್ಲಿ ವಿಲ್ ಚೇರ್ ನಲ್ಲಿ ಬಂದು ನಟಿ ಜಯಂತಿ ಅವರು ತಮ್ಮ ಆರೋಗ್ಯ ಕುರಿತಾಗಿ ಮಾತನಾಡಿ, ನಾನು ಬರುವಾಗ ಹೇಗಿದ್ದೆ ಈಗಲೂ ಚೆನ್ನಾಗಿ ಇದ್ದೇನೆ. ವೈದ್ಯರು ನನಗೆ ಮರುಜನ್ಮ ಕೊಟ್ಟಿದ್ದಾರೆ. ಮಗು ತರ ನನ್ನನ್ನು ನೋಡಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಅಭಿಮಾನಿಗಳ ಪ್ರೀತಿಗೆ ನಾನು ಆಭಾರಿ ಎಂದು ಭಾವುಕರಾಗಿ ಮಾತನಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ