Publish Date: Mon, 10 Sep 2018 (06:39 IST)
Updated Date: Mon, 10 Sep 2018 (07:13 IST)
ಬೆಂಗಳೂರು : ತಾಯಿಯಾಗುತ್ತಿರುವ ಸ್ಯಾಂಡಲ್ ವುಡ್ ನ ಸಿಂಡ್ರಲಾ ನಟಿ ರಾಧಿಕಾ ಪಂಡಿತ್ ತಮ್ಮ ಹಳೆಯ ಫೋಟೋವನ್ನು ಹಾಕಿ ಇದೀಗ ಚಿಂತಿಸುತ್ತಿದ್ದಾರೆ.
ಇತ್ತೀಚೆಗಷ್ಟೆ ತಾವು ಮಗುವಿಗಾಗಿ ಪೌಷ್ಠಿಕಾ ಆಹಾರವನ್ನು ಸೇವಿಸುತ್ತಿರುವ ಫೋಟೊವೊಂದನ್ನು ಹಂಚಿಕೊಂಡ ರಾಧಿಕಾ ಇದೀಗ ತಮಗೆ ಇಷ್ಟವಾದ ಉಡುಪು ಧರಿಸಿದ್ದ ಹಳೆಯ ಫೋಟೋವೊಂದನ್ನು ಹಾಕಿ 'ಈ ಉಡುಪು ಈಗ ನನಗೆ ಫಿಟ್ ಆಗುತ್ತಿಲ್ಲ. ಆದ್ದರಿಂದ ನನ್ನ ಹಳೆಯ ಫೋಟೋವನ್ನು ಶೇರ್ ಮಾಡುತ್ತಿದ್ದೇನೆ' ಎಂದು ಬರೆದು ಹಾಕಿದ್ದಾರೆ.
ನಟಿ ರಾಧಿಕಾ ಗರ್ಭಿಣಿಯಾದ ಕಾರಣ ಅವರಿಗೆ ಈ ಹಿಂದೆ ಧರಿಸಿದ್ದ ಯಾವ ಡ್ರೆಸ್ ಅವರ ದೇಹಕ್ಕೆ ಸರಿಹೊಂದುತ್ತಿಲ್ಲ ಎಂಬ ಚಿಂತೆ ಇದೀಗ ನಟಿ ರಾಧಿಕಾಗೆ ಕಾಡುತ್ತಿದೆ ಎಂಬುದು ಇದರಿಂದ ತಿಳಿಯುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.