Select Your Language

Notifications

webdunia
webdunia
webdunia
webdunia

ಹುಚ್ಚ 2 ಚಿತ್ರ ಇಷ್ಟು ತಡವಾಗಲು ಕಾರಣ ಯಾರು…?

ಹುಚ್ಚ 2 ಚಿತ್ರ ಇಷ್ಟು ತಡವಾಗಲು ಕಾರಣ ಯಾರು…?
ಬೆಂಗಳೂರು , ಗುರುವಾರ, 5 ಏಪ್ರಿಲ್ 2018 (07:52 IST)
ಬೆಂಗಳೂರು : ಕನ್ನಡದ ಖ್ಯಾತ ನಿರ್ದೇಶಕ ಓಂಪ್ರಕಾಶ್ ರಾವ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮದರಂಗಿ ಕೃಷ್ಣ ಅವರು ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ‘ಹುಚ್ಚ-2‘ ಚಿತ್ರ  ಇನ್ನೇನು ಬಿಡುಗಡೆಯಾಗಲಿದೆ. ಈ ಚಿತ್ರ ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು.ಆದರೆ ಅದು ತೀರಾ ತಡವಾದ ಕಾರಣದಿಂದ ಈ ಚಿತ್ರ ನಿಂತು ಹೋಗಿದೆಯೆನೋ ಎಂಬ ಅನುಮಾನ ಕೂಡ ಜನರಲ್ಲಿ ಮೂಡಿತ್ತು.


ಆದರೆ ಇದೀಗ ಚಿತ್ರ ಇಷ್ಟು ಲೇಟಾಗಿ ಬಿಡುಗಡೆಯಾಗಲು ಯಾರು ಕಾರಣವೆಂಬುದು ತಿಳಿದುಬಂದಿದೆ. ಇನ್ನೇನು ಬಿಡುಗಡೆಯಾಗಲಿರೋ ಈ ಚಿತ್ರದ ಬಗ್ಗೆ ಚಿತ್ರದ ನಿರ್ದೇಶಕ  ಓಂಪ್ರಕಾಶ್ ರಾವ್ ಅವರು ಮಾತನಾಡಿ ಚಿತ್ರ ತಡವಾಗಲು ತಾವೇ ಕಾರಣ ಎಂಬುದಾಗಿ ತಿಳಿಸಿದ್ದಾರೆ.ಈ ಬಗ್ಗೆ ಮಾತನಾಡಿದ ಅವರು,’ ಯಾವುದೇ ಚಿತ್ರ ನಿರ್ದೇಶನ ಮಾಡೋದಕ್ಕಿಂತಲೂ ಮುನ್ನ ಆ ಚಿತ್ರದ ಟೈಟಲ್ಲು ಪ್ರೇಕ್ಷಕರಲ್ಲಿ ಯಾವ ರೀತಿಯ ನಿರೀಕ್ಷೆ ಹುಟ್ಟು ಹಾಕುತ್ತದೆಂಬುದನ್ನು ಅರಿಯಬೇಕು. ಆ ನಂತರದಲ್ಲಿ ಅದೆಲ್ಲವನ್ನು ನೀಗುವಂಥಾ ರೀತಿಯಲ್ಲಿ ಚಿತ್ರವನ್ನು ರೂಪಿಸಬೇಕು. ಈ ಥರದ ಮನಸ್ಥಿತಿ ಹೊಂದಿದ್ದರಿಂದಲೇ ಚಿತ್ರೀಕರಣಕ್ಕೆ ಹೋಗೋದೇ ಕೊಂಚ ತಡವಾಯ್ತು. ಅದಕ್ಕೆ ಕಾರಣ ನಾನೇ.


ಸ್ವಲ್ಪ ದಿನ ಮೈಂಡ್ ಫ್ರೆಷ್ ಮಾಡಿಕೊಂಡು ಮುಂದುವರೆಸೋಣ ಅಂತಾ ಸುಮ್ಮನಾಗಿದ್ವಿ. ನಮ್ಮ 'ಕಟ್ಟೆ' ಸಿನಿಮಾ ಫ್ಲಾಪ್ ಆಗಿತ್ತು. ಆ ಸಿನಿಮಾ ನಮ್ಮ ತಪ್ಪು ನಿರ್ಧಾರ ಅಂತಾ ಗೊತ್ತಾಗಿತ್ತು. ಹೀಗಾಗಿ ಲೇಟಾಯ್ತು. ಆದರೆ ಚೂರು ತಡವಾದರೂ ಅಂದುಕೊಂಡ ರೀತಿಯಲ್ಲೇ ಚಿತ್ರ ಮಾಡಿದ ಖುಷಿ ಇದೆ’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ಭಾಗಿ-2' ಚಿತ್ರದಲ್ಲಿ ಟೈಗರ್ ಶ್ರಾಫ್ ಸಾಹಸ ನೋಡಿ ಮೆಚ್ಚಿಗೆಯ ಸುರಿಮಳೆ ಗೈದ ಬಾಲಿವುಡ ಸ್ಟಾರ್ ನಟರು!