Select Your Language

Notifications

webdunia
webdunia
webdunia
webdunia

ಬಾಲಿವುಡ್ ಸಿನಿಮಾರಂಗದ ವಿರುದ್ಧ ಸಿ.ಟಿ. ರವಿ ಕಿಡಿಕಾರಿದ್ಯಾಕೆ ಗೊತ್ತೇ…?

ಬಾಲಿವುಡ್ ಸಿನಿಮಾರಂಗದ ವಿರುದ್ಧ ಸಿ.ಟಿ. ರವಿ ಕಿಡಿಕಾರಿದ್ಯಾಕೆ ಗೊತ್ತೇ…?
ಬೆಂಗಳೂರು , ಸೋಮವಾರ, 9 ಜುಲೈ 2018 (06:54 IST)
ಬೆಂಗಳೂರು : ಬಾಲಿವುಡ್ ಸಿನಿಮಾರಂಗದ ವಿರುದ್ಧ ಬಿಜೆಪಿ ಮುಖಂಡ ಸಿ.ಟಿ. ರವಿ ಅವರು ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದಾರೆ.


ಕಿರಣ್ ಕುಮಾರ್ ಎಂಬ ವ್ಯಕ್ತಿ, ಬಾಲಿವುಡ್ ನಲ್ಲಿ ವಿಜಯನಗರದ ಬಗ್ಗೆ ಒಂದು ಸಿನಿಮಾ ಮಾಡಿಲ್ಲ. ಅದೇ ರೀತಿ ಕೃಷ್ಣ ದೇವರಾಯ ಅವರ ಬಗ್ಗೆಯೂ ವೈಭವಿಕರಿಸಿಲ್ಲ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ರೀಟ್ವೀಟ್ ಮಾಡಿದ ಸಿ.ಟಿ ರವಿ ಅವರು, ‘ಬಾಲಿವುಡ್ ಮುಸ್ಲಿಂ ಆಕ್ರಮಣಕಾರರನ್ನು, ದರೋಡೆಕೋರರನ್ನು ಮತ್ತು ಕಳ್ಳಸಾಗಾಣಿಕೆದಾರರನ್ನು ವೈಭವಿಕರಿಸುವಲ್ಲಿ ತುಂಬಾ ನಿರತರಾಗಿದ್ದಾರೆ. ಅವರಿಗೆ ಹಿಂದೂ ಆಡಳಿತಗಾರರ ಅತ್ಯುತ್ತಮ ಸಾಧನೆಗಳ ಬಗ್ಗೆ ಯೋಚಿಸಲು ಸಮಯವಿಲ್ಲ' ಎಂದು ವ್ಯಂಗ್ಯವಾಡಿದ್ದಾರೆ.


ಈ ಹಿಂದೆ ಬಿಡುಗಡೆಯಾದ ಬಾಲಿವುಡ್ ಸೂಪರ್ ಹಿಟ್ ಸಿನಿಮಾದಲ್ಲಿಯೂ ಕೂಡ ಹಿಂದೂ ದೊರೆಯಾಗಿದ್ದ ಮಹಾರಾವಲ್ ರತನ್ ಸಿಂಗ್ ಪಾತ್ರಕ್ಕಿಂತ, ಮುಸ್ಲಿಂ ದೊರೆ ಅಲ್ಲಾವುದ್ದೀನ್ ಖಿಲ್ಜಿಯನ್ನ ಹೆಚ್ಚಾಗಿ ವೈಭವೀಕರಿಸಲಾಗಿದೆ ಎಂದು ಟೀಕೆಗಳು ವ್ಯಕ್ತವಾಗಿದ್ದವು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಈ ನಟ ಹುಡುಗಿಯಾಗಿದ್ರೆ ಯಾರೂ ಇವರನ್ನು ಬಿಡ್ತಿರ್ಲಿಲ್ವಂತೆ. ಹೀಗೆ ಹೇಳಿದ್ದು ಯಾರು ಗೊತ್ತಾ?