Select Your Language

Notifications

webdunia
webdunia
webdunia
webdunia

ತೆಲುಗು ನಟಿ ಹರಿತೇಜಗೆ ಮಹಿಳೆಯೊಬ್ಬರು ಅವಮಾನ ಮಾಡಿದ್ದು ಯಾಕೆ...?

ತೆಲುಗು ನಟಿ ಹರಿತೇಜಗೆ ಮಹಿಳೆಯೊಬ್ಬರು ಅವಮಾನ ಮಾಡಿದ್ದು ಯಾಕೆ...?
ಚೆನ್ನೈ , ಸೋಮವಾರ, 21 ಮೇ 2018 (11:19 IST)
ಚೆನ್ನೈ: ತೆಲುಗು ನಟಿ ಹರಿತೇಜ ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ. ಈ ವಿಡಿಯೋ ಹರಿತೇಜಗಾದ ನೋವಿನ ಕುರಿತಾಗಿದ್ದಂತೆ.  ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಹೋಗಿದ್ದ ವೇಳೆ ಮಹಿಳೆಯೊಬ್ಬರು ಕೀರ್ತಿ ಸುರೇಶ್ ಅಭಿನಯದ 'ಮಹಾನಟಿ' ಚಿತ್ರವನ್ನ ನೋಡಲು ನಟಿ ಹರಿತೇಜ ಅವರ ಕುಟುಂಬದ ಜೊತೆ ಹೋಗಿದ್ದರಂತೆ. ಈ ವೇಳೆ ಮಹಿಳೆಯೊಬ್ಬರು ತಮ್ಮನ್ನ ಅವಮಾನಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಹರಿತೇಜ.


'ನಾನು, ತಂಗಿ, ತಂದೆ ಮತ್ತು ತಾಯಿ ಸಿನಿಮಾ ನೋಡಲು ಹೋಗಿದ್ದಾಗ, ಇಂಟರ್ ವಲ್ ವರೆಗೂ ನಾನು ಮತ್ತು ತಂಗಿ ಅಕ್ಕ-ಪಕ್ಕದಲ್ಲಿ ಕೂತಿದ್ದೇವು. ನಂತರ ಅಮ್ಮನ ಪಕ್ಕ ಕುಳಿತುಕೊಳ್ಳಲು ನಾನು ಹೋದೆ. ಆಗ ನನ್ನ ಜಾಗಕ್ಕೆ ಅಪ್ಪ ಬರಬೇಕು ಅಂತ ಎದ್ದು ಹೋದಾಗ, ಆ ಮಹಿಳೆಯೊಬ್ಬರು 'ನಿಮ್ಮ ತಂದೆ ಪಕ್ಕದಲ್ಲಿ ಕುಳಿತುಕೊಳ್ಳಲು ನನ್ನ ಮಗಳಿಗೆ ಕಷ್ಟವಾಗಬಹುದು. ಮೊದಲಿನಿಂತೆ ಕುಳಿತುಕೊಳ್ಳಿ ಎಂದರು'


ಅದಕ್ಕೆ ನಾನು 'ತಂದೆಯಂತವರು ಪಕ್ಕದಲ್ಲಿ ಕುಳಿತರೆ ಅದರಲ್ಲಿ ತಪ್ಪೇನಿದೆ ಎಂದು ಕೇಳಿದೆ ಆ ಮಹಿಳೆ 'ನೀವೆನೂ ಸಿನಿಮಾದವರಮ್ಮ, ಯಾರ ಪಕ್ಕದಲ್ಲಿ ಬೇಕಾದರೂ ಕುಳಿತುಕೊಳ್ಳಬಹುದು. ನಮಗೆ ದರಿದ್ರ ಇಲ್ಲ ಎಂದರು. ಆಮೇಲೆ ನಮ್ಮಿಬ್ಬರ ಮಧ್ಯೆ ದೊಡ್ಡ ಮಟ್ಟದ ಚರ್ಚೆಯಾಯಿತು. ಸಿನಿಮಾದವರ ಬಗ್ಗೆ ಅವರು ತುಂಬಾನೇ ಬೈದ್ರು' ಎಂದು ಆಕ್ರೋಶ ಹೊರಹಾಕಿದ್ದಾರೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೇಘನಾ ರಾಜ್ ನಟ ಸಿಂಬುವಿಗೆ ಧನ್ಯವಾದ ಹೇಳಿದ್ದು ಈ ಕಾರಣಕ್ಕಂತೆ!