Select Your Language

Notifications

webdunia
webdunia
webdunia
webdunia

ಸರಿಗಮಪ ಫೈನಲ್ ಗೆದ್ದ ಸ್ಪರ್ಧಿ ಇವರೇ, ಯಾರು ನೋಡಿ

SaReGaMaPa
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಹಾಡಿನ ರಿಯಾಲಿಟಿ ಶೋ ಗ್ರ್ಯಾಂಡ್ ಫಿನಾಲೆ ಇಂದು ನಡೆಯಲಿದೆ. ಕೆಲವು ಮೂಲಗಳ ಪ್ರಕಾರ ಫಿನಾಲೆ ಗೆದ್ದ ಸ್ಪರ್ಧಿ ಯಾರೆಂದು ಈಗಾಗಲೇ ರಿವೀಲ್ ಆಗಿದೆ. ಅವರು ಯಾರೆಂದು ನೋಡಿ.

ಈ ಬಾರಿ ಬಾಳು ಬೆಳಗುಂದಿ, ದ್ಯಾಮೇಶ್, ಆರಾಧ್ಯ,ಶಿವಾನಿ,ಅಮೋಘ, ರಶ್ಮಿ ಈ ಬಾರಿ ಫೈನಲಿಸ್ಟ್ ಗಳಾಗಿ ಬಂದಿದ್ದಾರೆ. ಈ ಆರು ಮಂದಿ ಪೈಕಿ ಒಬ್ಬರನ್ನು ವಿಜೇತರನ್ನಾಗಿ ಘೋಷಣೆ ಮಾಡಲಾಗುತ್ತದೆ. ಈ ಬಾರಿ ವಿಜೇತ ಸ್ಥಾನಕ್ಕಾಗಿ ಭಾರೀ ಪೈಪೋಟಿಯಿದೆ.

webdunia
ಬಾಳು ಬೆಳಗುಂದಿ ಉತ್ತರ ಕರ್ನಾಟಕ ಶೈಲಿಯ ಹಾಡುಗಳ ಮೂಲಕ ಜನರ ಮನಸ್ಸನ್ನು ಗೆದ್ದಿದ್ದಾರೆ. ಇನ್ನು, ದ್ಯಾಮೇಶ್ ಹಾಡು ಹಕ್ಕಿಯಂತೆ ಯಾರ ಬೆಂಬಲವೂ ಇಲ್ಲದೇ ಹಾಡು ಕಲಿತು ಬಂದು ಈಗ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಉಳಿದಂತೆ ಶಿವಾನಿ ಮತ್ತು ಆರಾಧ್ಯ ನಡುವೆ ಭಾರೀ ಪೈಪೋಟಿಯಿದೆ. ಇಬ್ಬರೂ ಶಾಸ್ತ್ರೀಯವಾಗಿ ಕಲಿತ ಗಾಯಕರು.

ಈ ನಡುವೆ ಈ ಬಾರಿ ತಮ್ಮ ಕಂಠಸಿರಿಯಿಂದ ನಿರೂಪಕರು, ಪ್ರೇಕ್ಷಕರ ಮನ ಗೆದ್ದ ಶಿವಾನಿ ವಿಜೇತರಾಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ರನ್ನರ್ ಅಪ್ ಆಗಿ ಉಡುಪಿಯ ಆರಾಧ್ಯ ಗೆಲುವು ಪಡೆದಿದ್ದಾರೆ ಎನ್ನಲಾಗಿದೆ. ಅಧಿಕೃತವಾಗಿ ತಿಳಿಯಬೇಕೆಂದರೆ ಇಂದಿನ ಗ್ರ್ಯಾಂಡ್ ಫಿನಾಲೆ ನೋಡಲೇಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

Madenur Manu: ರೇಪ್ ಕೇಸ್ ನಲ್ಲಿ ಅರೆಸ್ಟ್ ಆಗಿರುವ ಮಡೆನೂರು ಮನು ಕತೆ ಏನಾಗಿದೆ ನೋಡಿ