Select Your Language

Notifications

webdunia
webdunia
webdunia
webdunia

2020ರ ಸಾಲಿನ ದಕ್ಷಿಣ ಭಾರತದ ಅತ್ಯುತ್ತಮ ನಟ ಯಾರು ಗೊತ್ತಾ?

2020ರ ಸಾಲಿನ ದಕ್ಷಿಣ ಭಾರತದ ಅತ್ಯುತ್ತಮ ನಟ ಯಾರು ಗೊತ್ತಾ?
ಹೈದರಾಬಾದ್ , ಶನಿವಾರ, 26 ಡಿಸೆಂಬರ್ 2020 (10:59 IST)
ಹೈದರಾಬಾದ್ : ಕೊರೊನಾ ಕಾರಣದಿಂದ  2020ರಲ್ಲಿ ಚಿತ್ರರಂಗ ಭಾರೀ ನಷ್ಟವನ್ನು ಅನುಭವಿಸಿತ್ತು. ಚಿತ್ರಮಂದಿರ ಬಂದ್ ಆಗಿದ್ದ ಕಾರಣ ಕೆಲವೇ ಕೆಲವು ಚಿತ್ರಗಳು ಒಟಿಟಿಯಲ್ಲಿ ಬಿಡುಗಡೆಯಾಗಿದೆ.

ಹಾಗಾಗಿ ಈ ವರ್ಷ ತುಪಾಕಿ ಡಾಟ್ ಕಾಮ್ ನಡೆಸಿದ ಸಮೀಕ್ಷೆಯಲ್ಲಿ ಈ ವರ್ಷ ಬಿಡುಗಡೆಯಾದ ಚಲನಚಿತ್ರಗಳ ಪೈಕಿ ದಕ್ಷಿಣ ಭಾರತದ ಅತ್ಯುತ್ತಮ ನಾಯಕ ಯಾರು ಎಂದು ಪ್ರಕಟಿಸಿದೆ. ಇದರಲ್ಲಿ ನಟ ಸೂರ್ಯ ಅತಿ ಹೆಚ್ಚು ಮತಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದಾರೆ. ನಟ ಸೂರ್ಯ ಅವರ ಸೂರರೈ ಪೊಟ್ರು ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಿದ್ದು, ಇದಕ್ಕೆ ಪ್ರೇಕ್ಷಕರು 36.42% ಮತ ನೀಡಿದ್ದಾರೆ.

ಹಾಗೇ ಅಲ್ಲು ಅರ್ಜುನ್  ‘ಅಲಾ ವೈಕುಂಠಪುರಂ’ ಚಿತ್ರದಲ್ಲಿ 28.84% ರಷ್ಟು ಮತ ಪಡೆದು 2ನೇ ಸ್ಥಾನದಲ್ಲಿದ್ದರೆ, ಮಹೇಶ್ ಬಾಬು ‘ಸರಿಲೆರು ನಿಕೆವ್ವರು’ ಚಿತ್ರದಲ್ಲಿ 16.13% ಮತ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾನಿ ‘ತಕ್ ಜಗದೀಶ್’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ