Webdunia - Bharat's app for daily news and videos

Install App

ಡಿ ಬಾಸ್ ದರ್ಶನ್ ಮನಗೆದ್ದ ಪಾನಿಪೂರಿ ಅಂಗಡಿಯಾತ ಯಾರು? ಹಿನ್ನಲೆಯೇನು?

Webdunia
ಶುಕ್ರವಾರ, 29 ಡಿಸೆಂಬರ್ 2023 (08:40 IST)
ಬೆಂಗಳೂರು: ಕಾಟೇರ ಸಿನಿಮಾ ಪ್ರಮೋಷನ್ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಾನಿಪೂರಿ ಅಂಗಡಿಯೊಬ್ಬರ ಬಗ್ಗೆ ಹೇಳಿದ್ದು ಈಗ ಆ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಸಂದರ್ಶನವೊಂದರಲ್ಲಿ ದರ್ಶನ್, ಬೆಂಗಳೂರಿನ ನಾಗರಭಾವಿಯಲ್ಲಿ ವಿಕಲಚೇತನರೊಬ್ಬರು ನಡೆಸುತ್ತಿರುವ ಪಾನಿಪೂರಿ ಅಂಗಡಿ ಬಗ್ಗೆ ಮಾತನಾಡಿದ್ದರು. ಅವರು ನಮಗೆ ಸ್ಪೂರ್ತಿ. ಅಂಗ ವೈಫಲ್ಯವಿದೆಯೆಂದು ಯಾರ ಬಳಿಯೂ ಭಿಕ್ಷೆ ಬೇಡುತ್ತಿಲ್ಲ. ಬದಲಾಗಿ ತಾವೇ ನಾಲ್ಕು ಜನಕ್ಕೆ ಕೆಲಸ ಕೊಡುವ ಹಾಗೆ ಆಗಿದ್ದಾರೆ. ಅವರೆಲ್ಲಾ ನಮಗೆ ಸ್ಪೂರ್ತಿ ಎಂದಿದ್ದಾರೆ.

ಜೊತೆಗೆ ತಮ್ಮ ಸಂಗಡಿಗರಿಗೆ ಆ ಅಂಗಡಿಗೆ ಒಮ್ಮೆ ತಾನು ಹೋಗಬೇಕು ಎಂದು ಹೇಳಿಕೊಂಡಿದ್ದಾಗಿ ದರ್ಶನ್ ಹೇಳಿದ್ದರು. ಅವರ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಇದೀಗ ಆ ಚಾಟ್ಸ್ ಅಂಗಡಿ ಕೂಡಾ ಫೇಮಸ್ ಆಗಿದೆ.

ನಾಗರಭಾವಿಯಲ್ಲಿ ಹೊಟ್ಟೆಪಾಡು ಚಾಟ್ಸ್ ಎಂಬ ಚಾಟ್ಸ್ ಸೆಂಟರ್ ಇದೆ. ವೀರೇಶ್ ಅದರ ಮಾಲಿಕರು. ಅವರಿಗೆ ಒಂದು ಕಾಲು ಊನವಿದೆ. ಹಾಗಂತ ಅವರು ಸುಮ್ಮನೇ ಕುಳಿತಿಲ್ಲ. ಚಿಕ್ಕದಾಗಿ ಟ್ರಕ್ ಒಂದರಲ್ಲಿ ಶುರು ಮಾಡಿದ್ದ ಚಾಟ್ಸ್ ಸೆಂಟರ್ ಈಗ ನಾಲ್ಕು ಜನಕ್ಕೆ ಕೆಲಸ ಕೊಡುವ ಮಟ್ಟಿಗೆ ಬೆಳೆದು ನಿಂತಿದೆ. ಒಂದು ವರ್ಷ ಹಿಂದೆಯೇ ಯೂ ಟ್ಯೂಬ್ ನಲ್ಲಿ ಈ ಹೊಟ್ಟೆಪಾಡು ಚಾಟ್ಸ್ ಬಗ್ಗೆ ಪ್ರಸಾರವಾಗಿತ್ತು. ಆದರೆ ದರ್ಶನ್ ಸಂದರ್ಶನದಲ್ಲಿ ಆ ಸೆಂಟರ್ ಬಗ್ಗೆ ಹೇಳಿದ ಮೇಲೆ ಇದು ಇನ್ನಷ್ಟು ಫೇಮಸ್ ಆಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments