Publish Date: Tue, 01 May 2018 (13:36 IST)
Updated Date: Tue, 01 May 2018 (13:44 IST)
ಮಂಗಳೂರು: ಇತ್ತೀಚೆಗಷ್ಟೇ ನಟ ಸುದೀಪ್ ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಯಾಗಿ ಭಾಗಿ ಆಗಿದ್ದರು. ಕಿಚ್ಚ ಸುದೀಪ್ ತುಳು ಚಿತ್ರ"ಕಟಪಾಡಿ ಕಟ್ಟಪ್ಪೆ" ಎಂಬ ತುಳು ಚಿತ್ರದ ಆಡಿಯೋ ರಿಲೀಸ್ ಗಾಗಿ ಕಡಲ ತಡಿಗೆ ಭೇಟಿ ನೀಡಿದ್ದರು. ನೃತ್ಯ ನಿರ್ದೇಶಕ ರಾಜೇಶ್ ಬ್ರಹ್ಮಾವರ ನಿರ್ಮಾಣದ ಕಟಪಾಡಿ ಕಟ್ಟಪ್ಪೆ ಚಿತ್ರದ ಧ್ವನಿ ಸುರುಳಿಯನ್ನು ಸುದೀಪ್ ಬಿಡುಗಡೆ ಮಾಡಿದ್ದಾರೆ.
ಆಡಿಯೋ ರಿಲೀಸ್ ಬಳಿಕ ಮಾತನಾಡಿದ ಕಿಚ್ಚ ‘ತನ್ನ ತಾಯಿಯೂ ತುಳುವರಾಗಿದ್ದು ನಾನು ಮುಂದಿನ ದಿನದಲ್ಲಿ ತುಳು ಮಾತನಾಡಲು ಪ್ರಯತ್ನಿಸುತ್ತೇನೆ’ ಎಂದು ಹೇಳಿದ್ದಾರೆ .ಕನ್ನಡ ಚಿತ್ರರಂಗದಿಂದ ತುಳು ಚಿತ್ರದ ಆಡಿಯೋ ರಿಲೀಸ್ ಗೆ ನಾವೆಲ್ಲ ಬರುವಷ್ಟು ತುಳು ಚಿತ್ರರಂಗ ಬೆಳೆದಿದೆ ಎಂದಿದ್ದಾರೆ.
ಕರ್ನಾಟಕದಲ್ಲೇ ಇನ್ನೊಂದು ಭಾಷೆಯ ಚಿತ್ರದ ಆಡಿಯೋ ರಿಲೀಸ್ ಮಾಡೋದು ಖುಷಿ ತಂದಿದೆ. ಯಾವ ರಾಜ್ಯದಲ್ಲೂ ಎರಡು ಮೂರು ಭಾಷೆ ಇಲ್ಲ. ಹಾಗೆಯೇ ಎರಡು ಭಾಷೆಯ ಚಿತ್ರರಂಗ ಇಲ್ಲ ಅದು ಈ ಕರ್ನಾಟಕ ದಲ್ಲಿ ಮಾತ್ರ ಎಂದು ತಮ್ಮ ಅಭಿಪ್ರಾಯವನ್ನ ವ್ಯಕ್ತ ಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ