ಪೂಜೆಯಲ್ಲಿ ದರ್ಶನ್‌ಗಾಗಿ ಬೇಡಿಕೊಂಡರೆ ತಪ್ಪೇನು: ಗಿರಿಜಾ ಲೋಕೇಶ್

Sampriya
ಬುಧವಾರ, 14 ಆಗಸ್ಟ್ 2024 (17:18 IST)
Photo Courtesy X
ಬೆಂಗಳೂರು: ದಿನದಿಂದ ದಿನಕ್ಕೆ ಕನ್ನಡ ಚಿತ್ರರಂಗ ಪಾತಳಕ್ಕೆ ಹೋಗುತ್ತಿದ್ದು, ಸಂಕಷ್ಟದಿಂದ ಪಾರು ಮಾಡುವಂತೆ ಇಂದು ನಿರ್ಮಾಪಕ ರಾಕ್‌ಲೈನ್ ನೇತೃತ್ವದಲ್ಲಿ ಕಲಾವಿದರ ಸಂಘದ ಕಟ್ಟಡದಲ್ಲಿ ಸುಬ್ರಹ್ಮಣ್ಯ ಸರ್ಪ ಶಾಂತಿ ಹೋಮ ನಡೆಸಲಾಯಿತು.

ಇನ್ನೂ ಈ ಪೂಜೆಯನ್ನು ದರ್ಶನ್‌ಗೋಸ್ಕರ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಲಾಗಿತ್ತು. ಈ ಸಂಬಂಧ ಪೂಜೆಯಲ್ಲಿ ಭಾಗಿಯಾದ ಹಿರಿಯ ನಟಿ ಗಿರೀಜಾ ಲೊಕೇಶ್ ಅವರು ಪ್ರತಿಕ್ರಿಯಿಸಿ, ದರ್ಶನ್ ಅವರು ನಮ್ಮ ಚಿತ್ರರಂಗದ ಒಬ್ಬ ನಟರು. ಅವರಿಗೂ ಈ ಪೂಜೆಯಲ್ಲಿ ಬೇಡಿಕೊಂಡರೆ ತಪ್ಪೇನು. ಅವರು ಕನ್ನಡ ಸಿನಿಮಾ ರಂಗದ ಬೆಳವಣಿಗೆ ತುಂಬಾನೇ ಮುಖ್ಯ ಪಾತ್ರರಾಗಿದ್ದಾರೆ. ಅವರಿಗೆ ಬೇಡಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದಾರೆ.

ಈಚೆಗೆ ಕನ್ನಡ ಚಿತ್ರರಂಗ ಬಹಳ ಸಂಕಷ್ಟಕ್ಕೆ ಸಿಲುಕುತ್ತಿದ್ದ, ಸಿನಿಮಾ ನಿರ್ಮಾಪಕರು ಸಂಕಷ್ಟದಲ್ಲಿದ್ದಾರೆ. ಹತ್ತಾರು ಸಿನಿಮಾಗಳು ತೆರೆಕಂಡರೂ ಸಹ ಚಿತ್ರತಂಡ ಸಹ ನಿರೀಕ್ಷಿಸಿದ ಮಟ್ಟದಲ್ಲಿ ಯಶಸ್ಸು ಕಾಣುತ್ತಿಲ್ಲ. ಸಿನಿಮಾ ಯಶಸ್ವಿ ಆದರೆ ಅಷ್ಟೇ ನಿರ್ಮಾಪಕರು ಸಿನಿಮಾ ಮಾಡಲು ಮುಂದಾಗುತ್ತಾರೆ.  ಈ ಹಿನ್ನೆಲೆಯಲ್ಲಿ ಚಿತ್ರರಂಗವನ್ನು ಕಾಪಾಡುವಂತೆ ಕಲಾವಿದರ ಸಂಘ ದೇವರ ಮೊರೆ ಹೋಗಿದೆ.

ಬೆಳಗ್ಗೆಯಿಂದ ನಡೆ ಪೂಜಾ ಕಾರ್ಯದಲ್ಲಿ 8 ಜನರ ವಿಶೇಷ ಪುರೋಹಿತರ ತಂಡದಿಂದ ಈ ಪೂಜೆ ನಡೆಯುತ್ತಿದ್ದು, ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಹಾಗೂ ಅವರ ಪತ್ನಿ ಪೂಜೆ ನಡೆಸಿಕೊಡಲಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ದರ್ಶನ್ ಜೈಲು ಸೇರಿ ಶತದಿನೋತ್ಸವ, ಹೇಗಿದೆ ದಾಸನ ಜೈಲು ವಾಸ

ರಶ್ಮಿಕಾ ಮಂದಣ್ಣ ಮನೋಜ್ಞ ಅಭಿನಯದ ದಿ ಗರ್ಲ್​ಫ್ರೆಂಡ್ ಸಿನಿಮಾ ಒಟಿಟಿ ಬರಲು ಸಜ್ಜು

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಮುಂದಿನ ಸುದ್ದಿ
Show comments