Publish Date: Mon, 22 Jan 2018 (08:41 IST)
Updated Date: Mon, 22 Jan 2018 (08:52 IST)
ಬೆಂಗಳೂರು: ಪ್ರೇಮಿಯೊಬ್ಬ ತನ್ನ ಪ್ರೀತಿಯ ಹುಡುಗಿಯನ್ನು ಮೆಚ್ಚಿಸಲು ವಿಶೇಷವಾದ ಉಡುಗೊರೆಯನ್ನೇ ನೀಡುತ್ತಾನೆ. ನಟ ರಕ್ಷಿತ್ ಶೆಟ್ಟಿ ಕೂಡ ಒಬ್ಬ ಅದ್ಭುತ ಪ್ರೇಮಿ ಅನಿಸಿಕೊಂಡಿದ್ದಾರೆ. ತಮ್ಮ ಮನದನ್ನೆಯ ಆಸೆಯನ್ನು ಅರಿತು ಒಂದು ವಿಶೇಷವಾದ ಉಡುಗೊರೆಯನ್ನೇ ನೀಡಿದ್ದಾರೆ.
ಹೊಸ ವರ್ಷದ ಸಲುವಾಗಿ ರಶ್ಮಿಕಾ ಅವರಿಗೆ ಪುಟಾಣಿ ಬೆಕ್ಕಿನ ಮರಿಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ರಶ್ಮಿಕಾ ಅವರಿಗೆ ಪ್ರಾಣಿಗಳೆಂದರೆ ಬಲು ಪ್ರೀತಿಯಂತೆ. ಹಾಗಾಗಿ ಮನದನ್ನೆಯ ಆಸೆಯನ್ನು ಈಡೇರಿಸುವುದಕ್ಕಾಗಿ ರಕ್ಷಿತ್ ಈ ಉಡುಗೊರೆಯನ್ನು ನೀಡಿದ್ದಾರೆ.
ಈ ಪುಟಾಣಿ ಬೆಕ್ಕಿನ ಮರಿಗೆ ಸಿಂಭ ಎಂದು ನಾಮಕರಣ ಮಾಡಿದ್ದಾರೆ. ಇನ್ನು ರಶ್ಮಿಕಾ ಎಲ್ಲೆ ಹೋದರು ಸಿಂಭ ಕೂಡ ಅವರ ಜತೆಯಲ್ಲಿರುತ್ತದೆಯಂತೆ.
ಸ್ಯಾಂಡಲ್ ವುಡ್ ನ ಈ ಕ್ಯೂಟ್ ಜೋಡಿ ಇತ್ತೀಚೆಗಷ್ಟೇ ತಮ್ಮ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ