Select Your Language

Notifications

webdunia
webdunia
webdunia
webdunia

ಮಾಸ್ಟರ್ ಚಿತ್ರದ ನಕರಾತ್ಮಕ ವಿಮರ್ಶೆಗಳ ಬಗ್ಗೆ ಚಿತ್ರದ ನಿರ್ದೇಶಕರು ಹೇಳಿದ್ದೇನು?

ಮಾಸ್ಟರ್ ಚಿತ್ರದ ನಕರಾತ್ಮಕ ವಿಮರ್ಶೆಗಳ ಬಗ್ಗೆ ಚಿತ್ರದ ನಿರ್ದೇಶಕರು ಹೇಳಿದ್ದೇನು?
ಚೆನ್ನೈ , ಭಾನುವಾರ, 17 ಜನವರಿ 2021 (11:22 IST)
ಚೆನ್ನೈ : ನಿರ್ದೇಶಕ ಲೋಕೇಶ್ ಕನಗರಾಜ್ ನಿರ್ದೇಶನದ, ವಿಜಯ್ ಅಭಿನಯದ ಮಾಸ್ಟರ್ ಚಿತ್ರ ಜನವರಿ 13ರಂದು ಬಿಡುಗಡೆಯಾಗಿದೆ.

ಈ ಚಿತ್ರದಲ್ಲಿ ಮೊದಲ ಬಾರಿಗೆ ನಟ ವಿಜಯ್ ಹಾಗೂ ವಿಜಯ್ ಸೇತುಪತಿ ಜೊತೆಯಾಗಿ ನಟಿಸಿದ್ದಾರೆ. ಈ ಚಿತ್ರ ಸಂಕ್ರಾಂತಿಯ ವಿಶೇಷವಾಗಿ ಬಿಡುಗಡೆಯಾಗಿದ್ದು, ಇಲ್ಲಿಯವರೆಗೆ ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆದರೆ ಇಲ್ಲಿಯವರೆಗೆ ಮಾಸ್ಟರ್ ಚಿತ್ರದ ಬಗ್ಗೆ ಅನೇಕ ಭಾಗಗಳಿಂದ ಸಕರಾತ್ಮಕ ವಿಮರ್ಶೆಯ ಜೊತೆಗೆ ನಕರಾತ್ಮಕ ವಿಮರ್ಶೆಗಳು ಬಂದಿವೆ.

ಈ ಬಗ್ಗೆ ನಿರ್ದೇಶಕ ಲೋಕೇಶ್ ಕನಗರಾಜ್ ಅವರು ಪ್ರತಿಕ್ರಿಯೆ ನೀಡಿದ್ದು, ಟೀಕೆಗಳು ಯಾವುದೇ ಆಗಿದ್ದರೂ ಒಪ್ಪಿಕೊಳ್ಳುತ್ತೇವೆ, ಮಾಸ್ಟರ್ ಚಿತ್ರ ಹಲವರಿಗೆ ಇಷ್ಟವಾಗಿದೆ. ಹಾಗಾಗಿ ಜನರು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹುಟ್ಟುಹಬ್ಬದಂದು ಕ್ಷಮೆಯಾಚಿಸಿದ ವಿಜಯ್ ಸೇತುಪತಿ