Publish Date: Sat, 04 Aug 2018 (07:59 IST)
Updated Date: Sat, 04 Aug 2018 (08:01 IST)
ಬೆಂಗಳೂರು: ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸುದ್ದಿ ಮಾಡಿರುವ ನಟಿ ರಶ್ಮಿಕಾ ಮಂದಣ್ಣ, ನಟ ರಕ್ಷಿತ್ ಶೆಟ್ಟಿ ಜತೆ ಎಂಗೇಜ್ ಮೆಂಟ್ ಕೂಡ ಮಾಡಿಕೊಂಡಿದ್ದಾರೆ. ಕನ್ನಡದಾಚೆಗೂ ಹೋಗಿ ಸಾಕಷ್ಟು ಹೆಸರುಗಳಿಸಿದ್ದಾರೆ. ವಿಜಯ ದೇವರಕೊಂಡ ಅವರ ಜತೆ ಸಿನಿಮಾವೊಂದರಲ್ಲಿನ ಅವರ ಫೋಟೊಗೆ ಇತ್ತೀಚೆಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಈಗ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಡುವೆ ಬ್ರೇಕ್ ಅಪ್ ಆಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ನಮ್ಮ ನಡುವೆ ಬ್ರೇಕಪ್ ಆಗಿದೆ ಎನ್ನುವುದು ಜೋಕ್ ಆಫ್ ದಿ ಡೇ ಮತ್ತು ನಾನ್‌ಸೆನ್ಸ್ ಎಂದಿದ್ದಾರೆ ರಕ್ಷಿತ್ ಹಾಗೂ ರಶ್ಮಿಕಾ ಜೋಡಿ.
'ನಾವು ಮದುವೆ ಆಗುವವರೆಗೂ ಇಂಥ ಸುದ್ದಿಗಳಿಗೇನೂ ಬರವಿರುವುದಿಲ್ಲ. ಇದರ ಬಗ್ಗೆ ನಾನು ಪ್ರತಿಕ್ರಿಯೆಯನ್ನೇ ನೀಡಲು ಹೋಗುವುದಿಲ್ಲ. ಆದರೂ ನಮ್ಮಿಬ್ಬರ ನಡುವೆ ಬ್ರೇಕಪ್ ಆಗಿದೆ ಎನ್ನುವ ಸುದ್ದಿ, ದೊಡ್ಡ ನಾನ್‌ಸೆನ್ಸ್. ನಾನು ನನ್ನ ಕೆಲಸದಲ್ಲಿ ಬಿಜಿಯಾಗಿದ್ದೇನೆ. ರಶ್ಮಿಕಾ ಕೂಡ ಅವರ ಕೆಲಸದಲ್ಲಿ ಬಿಜಿಯಾಗಿದ್ದಾರೆ. ಸದ್ಯಕ್ಕೆ ನಾವು ಕೆಲಸ ಮಾತ್ರ ಮಾಡುತ್ತಿದ್ದೇವೆ. ಇಂಥ ಸುದ್ದಿಗಳಿಗೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. ಅಲ್ಲದೇ ಸುಖಾ ಸುಮ್ಮನೆ ಈ ರೀತಿಯ ಸುದ್ದಿಗಳನ್ನು ಯಾರೂ ಹಬ್ಬಿಸಬಾರದು ಎಂದು ರಕ್ಷಿತ್ ಶೆಟ್ಟಿ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ