ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಪೈಕಿ ಕಿರಿಯವರು ಪುನೀತ್. ಅವರಿಗೆ 46 ವರ್ಷ ವಯಸ್ಸಾಗಿತ್ತು.ಆದರೆ, ದೇವರು ಮೊದಲು ಕರೆದುಕೊಂಡಿದ್ದು ಪುನೀತ್ ಅವರನ್ನು. ಮನೆಯ ಕಿರಿಯ ಮಗ ಮೊದಲು ಹೋದನಲ್ಲ ಎನ್ನುವ ಕೊರಗು ಹಾಗೂ ದುಃಖ ರಾಜ್ಕುಮಾರ್ ಕುಟುಂಬವನ್ನು ಬಿಟ್ಟೂಬಿಡದೆ ಕಾಡುತ್ತಿದೆ. ಇನ್ನೂ ಸಾಧನೆ ಮಾಡುತ್ತಿರುವ ವಯಸ್ಸಿನಲ್ಲೇ ಅವರು ನಿಧನ ಹೊಂದಿದ್ದು ನಿಜಕ್ಕೂ ಬೇಸರದ ಸಂಗತಿ. ಆದರೆ, ಈ ನೋವಿನ ಜತೆ ಕುಟುಂಬ ಜೀವನ ನಡೆಸಿಕೊಂಡು ಹೋಗಬೇಕಿದೆ. ಇದೇ ಮಾತನ್ನು ರಾಘವೇಂದ್ರ ರಾಜ್ಕುಮಾರ್ ಹೇಳಿದ್ದಾರೆ.