Select Your Language

Notifications

webdunia
webdunia
webdunia
webdunia

Viral video: ನಟಿ ಸಮಂತಾಗೆ ರಸ್ತೆ ಮಧ್ಯೆಯೇ ಕಿರುಕುಳ

Samantha Ruth Prabhu

Krishnaveni K

ಮುಂಬೈ , ಮಂಗಳವಾರ, 17 ಜೂನ್ 2025 (17:54 IST)
Photo Credit: X
ಮುಂಬೈ: ಬಹುಭಾಷಾ ನಟಿ ಸಮಂತಾ ರುತ್ ಪ್ರಭುಗೆ ರಸ್ತೆ ಮಧ್ಯೆಯೇ ಕೆಲವು ಪಪ್ಪಾರಾಜಿಗಳು ಕಿರುಕಳ ನೀಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಟಿ ಸಮಂತಾ ಗ್ಲಾಮರಸ್ ಡ್ರೆಸ್ ನಲ್ಲಿ ಮುಂಬೈನ ರಸ್ತೆಯಲ್ಲಿ ಓಡಾಡುವಾಗ ಕೆಲವು ಯುವಕರು ಅವರ ಫೋಟೋ ತೆಗೆಯಲು ಹಿಂದೆ ಮುಂದೆ ಸುಳಿದಾಡಿದ್ದಾರೆ. ಫೋನ್ ನಲ್ಲಿ ಮಾತನಾಡುತ್ತಿದ್ದ ಸಮಂತಾಗೆ ಇದು ನಿಜಕ್ಕೂ ಕಿರಿ ಕಿರಿ ಉಂಟುಮಾಡಿದೆ.

ದಯವಿಟ್ಟು ನಿಲ್ಲಿಸಿ, ಫೋಟೋ ತೆಗೆಯಬೇಡಿ ಎಂದು ಸಮಂತಾ ಕೈ ಅಡ್ಡ ಹಿಡಿದು ಕೇಳಿಕೊಂಡರೂ ಯುವಕರು ಹಿಂದೆ ಮುಂದೆ ಮೊಬೈಲ್ ಕ್ಯಾಮರಾ ಹಿಡಿದುಕೊಂಡು ಸುತ್ತಾಡಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸೆಲೆಬ್ರಿಟಿಗಳ ಖಾಸಗಿತನವನ್ನು ಗೌರವಿಸಿ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಮ್ ನಲ್ಲಿ ವರ್ಕೌಟ್ ಮಾಡಿ ಹೊರಬರುತ್ತಿದ್ದಾಗ ಘಟನೆ ನಡೆದಿದೆ ಎನ್ನಲಾಗಿದೆ. ಕೊನೆಗೆ ತಮ್ಮ ಕಾರು ಕಂಡೊಡನೇ ಓಡಿ ಹೋಗಿ ಕಾರು ಏರಿ ಹೋಗಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಥಗ್ ಲೈಫ್ ಇಷ್ಟವಿಲ್ಲದಿದ್ರೆ ನೋಡ್ಬೇಡಿ, ಕರ್ನಾಟಕದಲ್ಲಿ ರಿಲೀಸ್ ಮಾಡಿ ಎಂದ ಸುಪ್ರೀಂಕೋರ್ಟ್