Publish Date: Wed, 30 Dec 2020 (16:08 IST)
Updated Date: Wed, 30 Dec 2020 (16:11 IST)
ಚೆನ್ನೈ : ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಸಣ್ಣಪುಟ್ಟ ವಿಚಾರಗಳನ್ನು ತಿಳಿದುಕೊಳ್ಳಲು ಇಷ್ಟಪಡುತ್ತಾರೆ ಮತ್ತು ಕುತೂಹಲದಿಂದ ಕಾಯುತ್ತಿರುತ್ತಾರೆ. ಅಂದ ಹಾಗೇ ಇದೀಗ ನಟ ವಿಕ್ರಮ್ ಅವರು ತಮ್ಮ ವೈಯಕ್ತಿಕ ವಿಚಾರನ್ನು ತಮ್ಮ ಅಭಿಮಾನಿಗಳ ಮುಂದೆ ತೆರೆದಿಟ್ಟಿದ್ದಾರೆ.
ಹೌದು. ನಟ ವಿಕ್ರಮ್ ಅವರು ತಮ್ಮ ಎರಡು ಮುಖದ ಚಿತ್ರದ ಪ್ರಚಾರಕ್ಕಾಗಿ ಕೇರಳಕ್ಕೆ ಹೋಗಿದ್ದರು. ಅಲ್ಲಿ ಕಾಲೇಜು ವಿದ್ಯಾರ್ಥಿಗಳು ಕೇಳಿದ ವೈಯಕ್ತಿಕ ಪ್ರಶ್ನೆಗೆ ಉತ್ತರಿಸಿದ್ದಾರೆ. ಅಲ್ಲಿ ಅಭಿಮಾನಿಯೊಬ್ಬರು ನಿಮ್ಮ ಮೊದಲ ಗೆಳತಿ ಯಾರು ಎಂದು ಕೇಳಿದ್ದಾರೆ. ಅದಕ್ಕೆ ಅವರು ನನ್ನ ಮೊದಲನೆ ಗೆಳತಿ ನನ್ನ 8ನೇ ತರಗತಿಯ ಅಕೌಂಟ್ ಶಿಕ್ಷಕಿ ಎಂದು ಹೇಳಿದ್ದಾರಂತೆ.