Publish Date: Wed, 30 Dec 2020 (16:04 IST)
Updated Date: Wed, 30 Dec 2020 (16:06 IST)
ಚೆನ್ನೈ : ನಟ ಆರ್ಯ ಅವರು ನಟ ವಿಶಾಲ್ ಜೊತೆ ಎನಿಮಿ ಚಿತ್ರದಲ್ಲಿ ಖಳನಾಯಕನಾಗಿ ನಟಿಸಿದ್ದರು. ಅವನ್-ಇವನ್ ಚಿತ್ರದ ಬಳಿಕ ಇದೀಗ ಈ ಜೋಡಿ ಮತ್ತೆ ಒಂದಾಗಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.
ಆದರೆ ಇದೀಗ ಎನಿಮಿ ಚಿತ್ರದಲ್ಲಿ ಆರ್ಯ ಅಭಿನಯದ ಫೈಟ್ ದೃಶ್ಯದ ಚಿತ್ರೀಕರಣದ ವೇಳೆ ಅಪಘಾತವೊಂದು ಸಂಭವಿಸಿದೆ. ನಟ ಆರ್ಯ ಡೂಪ್ ಬೇಡ ಎಂದು ಹೇಳಿದ್ದರಿಂದ ಅನಿರೀಕ್ಷಿತವಾಗಿ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆದರೆ ಚಿಕಿತ್ಸೆಯ ಬಳಿಕ ಮತ್ತೆ ಶೂಟಿಂಗ್ ಸ್ಥಳಕ್ಕೆ ಬಂದು ಉಳಿದ ದೃಶ್ಯದಲ್ಲಿ ನಟಿಸಿದ್ದಾರೆ. ಶೂಟಿಂಗ್ ನಿಲ್ಲಿಸಲು ಬಿಡದೆ ನೋವನ್ನು ಲೆಕ್ಕಿಸದೆ ನಟಿಸಿದ್ದನ್ನು ಕಂಡು ಸಿಬ್ಬಂದಿಗಳು ಅಚ್ಚರಿಗೊಂಡಿದ್ದಾರೆ ಎನ್ನಲಾಗಿದೆ.