Select Your Language

Notifications

webdunia
webdunia
webdunia
webdunia

ಅಣ್ಣಯ್ಯ ಜೋಡಿ ನಿಶಾ ರವಿಕೃಷ್ಣನ್, ವಿಕಾಸ್ ಉತ್ತಯ್ಯ ರೊಮ್ಯಾನ್ಸ್: ನಿಶಾ ತಾಯಿ ಮಾತು ನಿಜವಾಯ್ತಾ

Nisha-Vikas Uttaiah

Krishnaveni K

ಬೆಂಗಳೂರು , ಗುರುವಾರ, 16 ಜನವರಿ 2025 (11:48 IST)
ಬೆಂಗಳೂರು: ಅಣ್ಣಯ್ಯ ಧಾರವಾಹಿ ಮೂಲಕ ಮನೆ ಮಾತಾಗಿರುವ ನಟಿ ನಿಶಾ ರವಿಕೃಷ್ಣನ್ ಮತ್ತು ನಟ ವಿಕಾಸ್ ಉತ್ತಯ್ಯ ರೊಮ್ಯಾಂಟಿಕ್ ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ನೋಡಿ ನೆಟ್ಟಿಗರು ಅಮ್ಮನ ಮಾತು ನಿಜವೆನಿಸುತ್ತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ನಿಶಾ ಮತ್ತು ವಿಕಾಸ್ ತೆರೆಯ ಮೇಲೆ ಶಿವ-ಪಾರ್ವತಿಯಾಗಿ ಜನರಿಗೆ ಅಚ್ಚುಮೆಚ್ಚಾಗಿದ್ದಾರೆ. ಇದೀಗ ವಿಕಾಸ್ ಸಿನಿಮಾವೊಂದರಲ್ಲಿ ನಟಿಸುತ್ತಿದ್ದ ಆ ಸಿನಿಮಾದ ಹಾಡೊಂದಕ್ಕೆ ನಿಶಾ ಜೊತೆ ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿರುವ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಇದರಲ್ಲಿ ನಿಶಾ ಮತ್ತು ವಿಕಾಸ್ ಎಷ್ಟು ರೊಮ್ಯಾಂಟಿಕ್ ಆಗಿದ್ದಾರೆಂದರೆ ನಿಜ ಜೀವನದಲ್ಲೂ ಇವರ ನಡುವೆ ಏನೋ ಇದೆ ಎಂದು ಸಂಶಯಪಡುವಂತಿದೆ. ಇತ್ತೀಚೆಗೆ ಜೀ ಕನ್ನಡ ಕಾರ್ಯಕ್ರಮದಲ್ಲಿ ನಿಶಾ ಟ್ರೂತ್ ಆರ್ ಡೇರ್ ಆಡುವಾಗ ತಮ್ಮ ತಾಯಿಗೆ ಕರೆ ಮಾಡಿ ನಾನು ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳುತ್ತಾರೆ. ಯಾರು ಎಂದು ಕೇಳಿದಾಗ ಅದೇ ವಿಕಾಸ್ ಎಂದು ಹೇಳ್ತಾರೆ. ಅದಕ್ಕೆ ಗೊತ್ತಲ್ಲ ಮುಂದೆ ಹೇಳು ಎಂದಾಗ ಎಲ್ಲರೂ ಶಾಕ್ ಆಗ್ತಾರೆ. ಹೀಗಾಗಿ ಇಬ್ಬರೂ ಪ್ರೀತಿಸುತ್ತಿದ್ದಾರೇನೋ ಎಂಬ ಅನುಮಾನ ಅಭಿಮಾನಿಗಳಿಗೆ ಶುರುವಾಗಿತ್ತು.

ಇದೀಗ ಇಬ್ಬರ ರೊಮ್ಯಾಂಟಿಕ್ ವಿಡಿಯೋ ನೋಡಿದ ಮೇಲೆ ಅಮ್ಮ ಹೇಳಿದ್ದು ನಿಜವೇ ಇರಬೇಕು ಎಂದು ಕೆಲವರು ಕಾಮೆಂಟ್ ಮಾಡಿದರೆ ಮತ್ತೆ ಕೆಲವರು ನಿಜ ಜೀವನದಲ್ಲೂ ಒಂದಾಗಿ ನಿಮ್ಮದು ಸೂಪರ್ ಜೋಡಿ ಎಂದು ಕೊಂಡಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೇಣುಕಾಸ್ವಾಮಿ ಪ್ರಕರಣದ ಬಳಿಕ ದರ್ಶನ್ ರಲ್ಲಿದೆ ಕಾಣ್ತಿದೆ ಈ ದೊಡ್ಡ ಬದಲಾವಣೆ