Select Your Language

Notifications

webdunia
webdunia
webdunia
webdunia

ಮೊದಲ ಆಷಾಢ ಶುಕ್ರವಾರ: ಗಂಡ ದರ್ಶನ್ ಮಾಡುತ್ತಿದ್ದ ಕೆಲಸವನ್ನು ತಾನೇ ಮಾಡಿದ ವಿಜಯಲಕ್ಷ್ಮಿ

Vijayalakshmi Darshan
ಮೈಸೂರು: ಮೊದಲ ಆಷಾಢ ಶುಕ್ರವಾರದಂದು ಗಂಡ ದರ್ಶನ್ ಮಾಡುತ್ತಿದ್ದ ಕೆಲಸವನ್ನು ಅವರ ಪರವಾಗಿ ಇದೀಗ ಪತ್ನಿ ವಿಜಯಲಕ್ಷ್ಮಿಯವರೇ ಮಾಡಿದ್ದಾರೆ.

ನಟ ದರ್ಶನ್ ಮೈಸೂರಿನ ಚಾಮುಂಡಿ ತಾಯಿಯ ಪರಮ ಭಕ್ತರು. ಆಗಾಗ ಚಾಮುಂಡಿ ತಾಯಿಯ ದರ್ಶನಕ್ಕೆ ಬರುತ್ತಿದ್ದರು. ಅದರಲ್ಲೂ ಪ್ರತೀ ವರ್ಷ ಆಷಾಢ ಶುಕ್ರವಾರದಂದು ಮೈಸೂರು ಚಾಮುಂಡಿ ತಾಯಿಯ ದರ್ಶನ ಮಾಡಿಯೇ ಮಾಡುತ್ತಿದ್ದರು.

ಆದರೆ ದರ್ಶನ್ ಈಗ ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಜೈಲು ಪಾಲಾಗಿದ್ದಾರೆ. ಹೀಗಾಗಿ ದರ್ಶನ್ ಗೆ ಕಳೆದ ಎರಡು ವರ್ಷಗಳಿಂದ ಆಷಾಢ ಶುಕ್ರವಾರದಂದು ಚಾಮುಂಡಿ ತಾಯಿಯ ದರ್ಶನ ಮಾಡಲು ಸಾಧ್ಯವಾಗಿಲ್ಲ. ಆದರೆ ದರ್ಶನ್ ಪರವಾಗಿ ಅವರ ಪತ್ನಿ ವಿಜಯಲಕ್ಷ್ಮಿ ಚಾಮುಂಡಿ ದರ್ಶನಕ್ಕೆ ಬಂದಿದ್ದಾರೆ.

ಇಂದು ಬೆಳಿಗ್ಗೆಯೇ ತಮ್ಮ ಸ್ನೇಹಿತರೊಂದಿಗೆ ಮೈಸೂರಿನ ಚಾಮುಂಡಿ ದೇವಾಲಯಕ್ಕೆ ಭೇಟಿ ನೀಡಿದ ವಿಜಯಲಕ್ಷ್ಮಿ ಗಂಡನ ಪರವಾಗಿ ತಾವೇ ದೇವಿಯ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದ್ದಾರೆ. ದರ್ಶನ್ ಜೈಲು ಪಾಲಾದ ಬಳಿಕ ವಿಜಯಲಕ್ಷ್ಮಿ ಹೋಗದ ದೇವಾಲಯಗಳಿಲ್ಲ. ಎಲ್ಲೇ ಹೋದರೂ ಗಂಡನಿಗಾಗಿ ಪ್ರಾರ್ಥನೆ ನಡೆಸುತ್ತಲೇ ಇರುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ಯಾನ್ಸರ್‌ ಅನ್ನು ಸಾಮಾನ್ಯ ಜ್ವರದಂತೆ ಎದುರಿಸಿದೆ: ಕ್ಯಾನ್ಸರ್ ಗೆದ್ದು ಬಂದ ಬಗ್ಗೆ ಸಂಜಯ್ ದತ್ ಮಾತು