ಪತಿ ದರ್ಶನ್ ಗಾಗಿ ಕೊಲ್ಲೂರು ಮೂಕಾಂಬಿಕೆಗೆ ಮಳೆಯನ್ನೂ ಲೆಕ್ಕಿಸದೇ ಪೂಜೆ ಮಾಡಿದ ವಿಜಯಲಕ್ಷ್ಮಿ

Krishnaveni K
ಶುಕ್ರವಾರ, 26 ಜುಲೈ 2024 (09:46 IST)
Photo Credit: Facebook
ಉಡುಪಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಪತಿ ದರ್ಶನ್ ಬಿಡುಗಡೆಗಾಗಿ ಪತ್ನಿ ವಿಜಯಲಕ್ಷ್ಮಿ ಈಗ ದೇವರ ಮೊರೆ ಹೋಗಿದ್ದಾರೆ. ಇಂದು ಆಷಾಢ ಶುಕ್ರವಾರ ನಿಮಿತ್ತ ಕೊಲ್ಲೂರು ಮೂಕಾಂಬಿಕೆಯ ದರ್ಶನ್ ಪಡೆದು ಪೂಜೆ ಮಾಡಿದ್ದಾರೆ.

ಆಷಾಢ ಶುಕ್ರವಾರ ದೇವಿಗೆ ವಿಶೇಷ. ಅದರಲ್ಲೂ ಕೊಲ್ಲೂರು ಮೂಕಾಂಬಿಕೆಗೆ ವಿಶೇಷ ಪೂಜೆ ನಡೆಯುತ್ತದೆ. ಇದೀಗ ಪತಿ ದರ್ಶನ್ ಬಿಡುಗಡೆಗೆ ವಿಜಯಲಕ್ಷ್ಮಿ ದೇವಿಯ ಮೊರೆ ಹೋಗಿದ್ದಾರೆ. ಕೊಲ್ಲೂರಿನಲ್ಲಿ ಚಂಡಿಕಾಹೋಮ ವಿಶೇಷವಾಗಿದೆ. ಹೀಗಾಗಿ ಇಂದು ಕಷ್ಟ ನಿವಾರಣೆಗಾಗಿ ವಿಜಯಲಕ್ಷ್ಮಿ ಚಂಡಿಕಾ ಹೋಮ ಮಾಡಿಸಿದ್ದಾರೆ.

ಮಳೆಯನ್ನೂ ಲೆಕ್ಕಿಸದೇ ವಿಜಯಲಕ್ಷ್ಮಿ ಭಾವುಕರಾಗಿ ದೇವಿಯ ಮುಂದೆ ಕಷ್ಟ ಪರಿಹರಿಸುವಂತೆ ಪ್ರಾರ್ಥನೆ ನಡೆಸಿದ್ದಾರೆ. ವಿಜಯಲಕ್ಷ್ಮಿಗೆ ಅವರ ಆಪ್ತರೂ ಸಾಥ್ ನೀಡಿದ್ದಾರೆ. ಮೂಕಾಂಬಿಕೆಯ ಸನ್ನಿಧಿಯಲ್ಲಿ  ಅವರು ಕೊಂಚ ಭಾವುಕರಾಗಿರುವಂತೆ ಕಂಡುಬಂದರು. ದರ್ಶನ್ ಬಿಡುಗಡೆಗೆ ವಿಜಯಲಕ್ಷ್ಮಿ ತಮ್ಮಿಂದಾದ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ.

ಇತ್ತೀಚೆಗೆ ವಿಜಯಲಕ್ಷ್ಮಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಪತಿಯ ಬಿಡುಗಡೆಗೆ ಸಹಾಯ ಯಾಚಿಸಿದ್ದರು. ರಾಜಕೀಯ ಗಣ್ಯರ ಮೂಲಕ, ಪ್ರಭಾವೀ ವಕೀಲರನ್ನು ನೇಮಿಸುವ ಮೂಲಕ ವಿಜಯಲಕ್ಷ್ಮಿ ಕಾನೂನು ಹೋರಾಟ ನಡೆಸುತ್ತಲೇ ಇದ್ದಾರೆ. ಇದಲ್ಲದೆ, ಪತಿಯನ್ನು ಆಗಾಗ ಜೈಲಿಗೆ ಬಂದು ಭೇಟಿ ಮಾಡಿ ಧೈರ್ಯ ತುಂಬುತ್ತಿದ್ದಾರೆ. ಇದನ್ನು ನೋಡಿ ವಿಜಯಲಕ್ಷ್ಮಿ ಬಗ್ಗೆ ಜನರು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪತ್ನಿ ಎಂದರೆ ಹೀಗಿರಬೇಕು ಎನ್ನುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕ್ಲೈಮ್ಯಾಕ್ಸ್‌ ಹಂತಕ್ಕೆ ನಟಿ ರನ್ಯಾ ವಿರುದ್ಧದ ಪ್ರಕರಣ: ಶೀಘ್ರದಲ್ಲೇ ಚಾರ್ಚ್‌ಶೀಟ್‌ ಸಲ್ಲಿಕೆ

ಪರಶುರಾಮನ ಪಾತ್ರಕ್ಕೆ ಮದ್ಯ, ನಾನ್ ವೆಜ್ ಬಿಟ್ಟ ವಿಕ್ಕಿ ಕೌಶಾಲ್: ಪತ್ನಿ ಜೊತೆ ಅದನ್ನೂ ಮಾಡ್ಬೇಡಿ ಎಂದ ನೆಟ್ಟಿಗರು

ಮೊದಲ ಮಗುವಿಗೆ ಜನ್ಮವಿತ್ತ ಕತ್ರಿನಾ ಕೈಫ್: ವಿಕ್ಕಿ ಕೌಶಾಲ್ ಮನೆಯಲ್ಲಿ ಸಂಭ್ರಮ

ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಮದುವೆ ಡೇಟ್ ಫಿಕ್ಸ್

ಹರೀಶ್ ರಾಯ್ ಅಂತಿಮ ದರ್ಶನಕ್ಕೆ ಬಂದು ಯಶ್ ಮಾಡಿದ ಕೆಲಸಕ್ಕೆ ಎಲ್ಲರೂ ಶಾಕ್

ಮುಂದಿನ ಸುದ್ದಿ
Show comments