Publish Date: Sat, 07 May 2022 (07:30 IST)
Updated Date: Sat, 07 May 2022 (07:32 IST)
ಚೆನ್ನೈ: ಕೆಜಿಎಫ್ 2 ಅಬ್ಬರದ ನಡುವೆ ಬಿಡುಗಡೆಯಾಗಿದ್ದ ದಳಪತಿ ವಿಜಯ್ ಅಭಿನಯದ ಬೀಸ್ಟ್ ಸಿನಿಮಾ ಕೊನೆಗೂ ಬಾಕ್ಸ್ ಆಫೀಸ್ ನಲ್ಲಿ 250 ಕೋಟಿ ರೂ. ಗಳಿಕೆ ಮಾಡಿದೆ.
ಏಪ್ರಿಲ್ 13 ರಂದು ಬೀಸ್ಟ್ ಬಿಡುಗಡೆಯಾಗಿತ್ತು. ಏಪ್ರಿಲ್ 14 ರಂದು ಕೆಜಿಎಫ್ 2 ಬಿಡುಗಡೆಯಾಗಿತ್ತು. ಹೀಗಾಗಿ ಮೊದಲ ದಿನ ಉತ್ತಮ ಗಳಿಕೆ ಮಾಡಿದ್ದ ಬೀಸ್ಟ್ ಗೆ ಎರಡನೇ ದಿನದಿಂದ ಹೊಡೆತ ಬಿತ್ತು.
ಈಗ 23 ದಿನಗಳ ಬಳಿಕ ಬೀಸ್ಟ್ 250 ಕೋಟಿ ಗಳಿಕೆ ಮಾಡಿದೆ. ಆರಂಭದ ಹೈಪ್ ನೋಡಿದರೆ ಕಡಿಮೆಯೆನಿಸಿದರೂ 250 ಕೋಟಿ ಗಳಿಕೆ ಸಾಮಾನ್ಯ ಸಾಧನೆಯಲ್ಲ ಎನ್ನಬಹುದು.