Select Your Language

Notifications

webdunia
webdunia
webdunia
webdunia

ನಾನೆಂದೂ ನಿನ್ನವ..!: ಪತ್ನಿಗೆ ಭಾವನಾತ್ಮಕ ಸಂದೇಶ ಬರೆದ ನಟ ವಿಜಯ್ ರಾಘವೇಂದ್ರ

ನಾನೆಂದೂ ನಿನ್ನವ..!: ಪತ್ನಿಗೆ ಭಾವನಾತ್ಮಕ ಸಂದೇಶ ಬರೆದ ನಟ ವಿಜಯ್ ರಾಘವೇಂದ್ರ
ಬೆಂಗಳೂರು , ಶುಕ್ರವಾರ, 18 ಆಗಸ್ಟ್ 2023 (15:47 IST)
ಬೆಂಗಳೂರು: ಪ್ರೀತಿಯ ಮಡದಿ ತೀರಿಕೊಂಡ ಬಳಿಕ ಇದೇ ಮೊದಲ ಬಾರಿಗೆ ನಟ ವಿಜಯ್ ರಾಘವೇಂದ್ರ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.

ಪತ್ನಿ ಸ್ಪಂದನಾ ಇತ್ತೀಚೆಗೆ ಅಕಾಲಿಕ ನಿಧನರಾಗಿದ್ದರು. ಇದಾದ ಬಳಿಕ ಮಾಧ‍್ಯಮಗಳು, ಸೋಷಿಯಲ್ ಮೀಡಿಯಾದಿಂದ ವಿಜಯ್ ರಾಘವೇಂದ್ರ ದೂರವೇ ಉಳಿದಿದ್ದರು. ಮೊನ್ನೆಯಷ್ಟೇ ಸ್ಪಂದನಾ ಉತ್ತರಕ್ರಿಯೆಗಳು ಮುಗಿದಿದ್ದು, ಇದರ ಬೆನ್ನಲ್ಲೇ ಪತ್ನಿಯ ಕುರಿತು ಭಾವನತಾತ್ಮಕ ಸಂದೇಶ ಬರೆದಿದ್ದಾರೆ.

‘ಸ್ಪಂದನ.. ಹೆಸರಿಗೆ ತಕ್ಕ ಜೀವ, ಅಳತೆಗೆ ತಕ್ಕ ನುಡಿ… ಬದುಕಿಗೆ ತಕ್ಕ ನಡೆ… ನಮಗೆಂದೇ ಮಿಡಿದ ನಿನ್ನ ಹೃದಯವ… ನಿಲ್ಲದು ನಿನ್ನೊಂದಿಗಿನ ಕಲರವ, ನಾನೆಂದೂ ನಿನ್ನವ… ಕೇವಲ ನಿನ್ನವ..’  ತಮ್ಮ ಧ್ವನಿಯಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ಅವರ ಈ ಪೋಸ್ಟ್ ಗೆ ಅನೇಕ ಸೆಲೆಬ್ರಿಟಿ ಸ್ನೇಹಿತು, ಫ್ಯಾನ್ಸ್ ಪ್ರತಿಕ್ರಿಯಿಸಿದ್ದು ಧೈರ್ಯ ತುಂಬಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ಜೊತೆ ಹೊಸ ಸುದ್ದಿ ಕೊಟ್ಟ ಭುವನ್ ಪೊನ್ನಣ್ಣ