Select Your Language

Notifications

webdunia
webdunia
webdunia
webdunia

ಮದುವೆ ಕರೆಯೋಲೆ ಜೊತೆ ಪ್ರೀತಿ ಹುಟ್ಟಿದ್ದು ಹೇಗೆ ಎಂದು ವಿವರಿಸಿದ ಹರ್ಷಿಕಾ ಪೂಣಚ್ಚ, ಭುವನ್

ಮದುವೆ ಕರೆಯೋಲೆ ಜೊತೆ ಪ್ರೀತಿ ಹುಟ್ಟಿದ್ದು ಹೇಗೆ ಎಂದು ವಿವರಿಸಿದ ಹರ್ಷಿಕಾ ಪೂಣಚ್ಚ, ಭುವನ್
ಬೆಂಗಳೂರು , ಶುಕ್ರವಾರ, 18 ಆಗಸ್ಟ್ 2023 (09:10 IST)
ಬೆಂಗಳೂರು: ಇದೇ ತಿಂಗಳು ಹಸೆಮಣೆ ಏರಲಿರುವ ಸ್ಯಾಂಡಲ್ ವುಡ್ ಜೋಡಿ ಹರ್ಷಿಕಾ ಪೂಣಚ್ಚ-ಭುವನ್ ಪೊನ್ನಣ್ಣ ಮಾಧ‍್ಯಮಗಳ ಮುಖಾಂತರ ತಮ್ಮ ಪ್ರೀತಿ, ಮದುವೆ ವಿಚಾರವನ್ನು ಮುಕ್ತವಾಗಿ ಮಾತನಾಡಿದ್ದಾರೆ.

ಆಗಸ್ಟ್ 24 ರಂದು ಹರ್ಷಿಕಾ-ಭುವನ್ ತಮ್ಮ 12 ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆಯೊತ್ತಲಿದ್ದಾರೆ. ಕೊಡಗಿನಲ್ಲಿ ಕೊಡವ ಸಂಪ್ರದಾಯದಂತೆ ಮದುವೆಯಾಗಲಿದ್ದಾರೆ. ಇದಕ್ಕಾಗಿ ಮಾಧ‍್ಯಮಗಳ ಮೂಲಕ ಆಹ್ವಾನ ನೀಡಿದ್ದಾರೆ. ಅಲ್ಲದೆ, ತಮ್ಮ ನಡುವೆ ಪ್ರೀತಿ ಹುಟ್ಟಿದ್ದು ಹೇಗೆ ಎಂಬುದನ್ನೂ ವಿವರಿಸಿದ್ದಾರೆ.

ಫ್ಯಾಶನ್ ಶೋ ಒಂದರಲ್ಲಿ ಇಬ್ಬರೂ ಮೊದಲ ಭಾರಿ ಭೇಟಿಯಾಗಿದ್ದರು. ಬಳಿಕ ಅಗ್ರಜ ಸಿನಿಮಾ ಮುಹೂರ್ತ ಕಾರ್ಯಕ್ರಮದಲ್ಲಿ ಇಬ್ಬರೂ ಭೇಟಿಯಾಗಿದ್ದರು. ಅದಾದ ಬಳಿಕ ಭುವನ್ ಮೆಸೇಜ್ ಮಾಡಿ ಪ್ರಪೋಸ್ ಮಾಡಿದ್ದರು ಎಂದಿದ್ದಾರೆ ಹರ್ಷಿಕಾ. 12 ವರ್ಷಗಳ ಕಾಲ ಇಬ್ಬರೂ ಪ್ರೀತಿ ಮಾಡಿದ್ದಾರೆ. ಮನೆಯವರ ಒಪ್ಪಿಗೆ ಪಡೆದು ಇದೀಗ ಮದುವೆಯಾಗುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಸಪ್ತಸಾಗರದಾಚೆ ಎಲ್ಲೊ ಸಿನಿಮಾ? ರಕ್ಷಿತ್ ಶೆಟ್ಟಿ ಕೊಟ್ರು ಉತ್ತರ