Select Your Language

Notifications

webdunia
webdunia
webdunia
webdunia

ಮದುವೆ ಜೊತೆ ಹೊಸ ಸುದ್ದಿ ಕೊಟ್ಟ ಭುವನ್ ಪೊನ್ನಣ್ಣ

ಮದುವೆ ಜೊತೆ ಹೊಸ ಸುದ್ದಿ ಕೊಟ್ಟ ಭುವನ್ ಪೊನ್ನಣ್ಣ
ಬೆಂಗಳೂರು , ಶುಕ್ರವಾರ, 18 ಆಗಸ್ಟ್ 2023 (09:49 IST)
ಬೆಂಗಳೂರು: ಇದೇ ತಿಂಗಳು ತಮ್ಮ ಬಹುಕಾಲದ ಗೆಳತಿ ಹರ್ಷಿಕಾ ಪೂಣಚ್ಚ ಜೊತೆ ಮದುವೆಯಾಗಲಿರುವ ಭುವನ್ ಪೊನ್ನಣ್ಣ ಇದರ ಜೊತೆಗೆ ಮತ್ತೊಂದು ಸುದ್ದಿ ಕೊಟ್ಟಿದ್ದಾರೆ.

ಕಳೆದ ಎರಡು ವರ್ಷಗಳಿಂದ ಭುವನ್ ಯಾವುದೇ ಸಿನಿಮಾ ಮಾಡಿಲ್ಲ. ಇದಕ್ಕೆ ಕಾರಣ ತಾವು ತಮ್ಮದೇ ತೋಟ, ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿದ್ದು ಎಂದಿದ್ದಾರೆ. ಆದರೆ ಕಳೆದ ಒಂದೂವರೆ ವರ್ಷದಿಂದ ಸ್ನೇಹಿತರ ಜೊತೆಗೂಡಿ ಒಂದು ಸ್ಕ್ರಿಪ್ಟ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದೆ. ಅದು ಬಾಕ್ಸಿಂಗ್ ಕುರಿತಾದ ಕತೆ.

ಈ ಸಿನಿಮಾದ ಟೈಟಲ್ ಅನ್ನು ಭುವನ್ ನಿನ್ನೆ ಲಾಂಚ್ ಮಾಡಿದ್ದಾರೆ. ‘ಭುವನಮ್ ಶ್ರೇಷ್ಠಮ್ ಗಚ್ಚಾಮಿ’ ಎನ್ನುವ ಟೈಟಲ್ ಫಿಕ್ಸ್ ಆಗಿದೆ. ಈ ಸಿನಿಮಾವನ್ನು ಭುವನ್ ಮತ್ತು ಹರ್ಷಿಕಾ ತಮ್ಮದೇ ಹೊಸ ಬ್ಯಾನರ್ ಮೂಲಕ ನಿರ್ಮಾಣ ಮಾಡಲಿದ್ದಾರೆ. ಈ ಸಿನಿಮಾ ಮೂಲಕ ಹರ್ಷಿಕಾ ನಿರ್ಮಾಪಕಿಯಾಗಿ ಬಡ್ತಿ ಪಡೆಯಲಿದ್ದಾರೆ. ಕತೆ, ಚಿತ್ರಕತೆ, ನಿರ್ದೇಶನ ಎಲ್ಲವೂ ಭುವನ್ ಅವರೇ ಮಾಡುತ್ತಿದ್ದಾರೆ. ಆದರೆ ಹೀರೋಯಿನ್ ಮಾತ್ರ ನಾನಲ್ಲ ಎಂದಿದ್ದಾರೆ.  ಚಿತ್ರ ಇನ್ನೂ ಸೆಟ್ಟೇರಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮಯ ಉಲ್ಲಂಘಿಸಿ ಕಟ್ಟಡ ನಿರ್ಮಾಣ: ಗೋಲ್ಡನ್ ಸ್ಟಾರ್ ಗಣೇಶ್ ಗೆ ನೋಟಿಸ್