Publish Date: Thu, 26 Feb 2026 (11:43 IST)
Updated Date: Thu, 26 Feb 2026 (11:46 IST)
ಉದಯಪುರ: ಬಹುದಿನಗಳಿಂದ ಫ್ಯಾನ್ಸ್ ಕಾಯುತ್ತಿದ್ದ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಮದುವೆ ಕೊನೆಗೂ ನೆರವೇರಿದೆ. ಇಂದು ಬೆಳಿಗ್ಗೆ 8 ಗಂಟೆಗಿನ ಮುಹೂರ್ತದಲ್ಲಿ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ತೆಲುಗಿನ ವಿಜಯ್ ದೇವರಕೊಂಡ ಸತಿಯಾಗಿದ್ದಾರೆ.
ಉದಯಪುರದಲ್ಲಿ ತೀರಾ ಖಾಸಗಿಯಾಗಿ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಮದುವೆಯಾಗಿದ್ದಾರೆ. ಈ ಮದುವೆಗೆ ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರು ಮಾತ್ರ ಸಾಕ್ಷಿಯಾಗಿದ್ದಾರೆ. ಇಂದು ಬೆಳಿಗ್ಗೆ 8 ಗಂಟೆಗೆ ಸುಮೂರ್ಹತದಲ್ಲಿ ಅಭಿಮಾನಿಗಳ ವಿರೋಶ್ ಜೋಡಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.
ಇಂದು ಬೆಳಿಗ್ಗೆ ತೆಲುಗು ಸಂಪ್ರದಾಯದಂತೆ ಮದುವೆ ನಡೆದಿದೆ. ಇಂದು ಸಂಜೆಯೇ ಈ ಜೋಡಿ ಮತ್ತೊಮ್ಮೆ ಮದುವೆಯಾಗಲಿದ್ದಾರೆ. ರಶ್ಮಿಕಾ ಮೂಲತಃ ಕೊಡಗಿನವರು. ಹೀಗಾಗಿ ಅವರ ಸಂಪ್ರದಾಯದ ಪ್ರಕಾರ ಇಂದು ಸಂಜೆ ಮತ್ತೊಮ್ಮೆ ಮದುವೆಯಾಗಲಿದ್ದಾರೆ.
ಕನ್ನಡ ನಟಿ ಆಶಿಕಾ ರಂಗನಾಥ್, ನಿರ್ದೇಶಕ ಸಂದೀಪ್ ರೆಡ್ಡಿ ಸೇರಿದಂತೆ ಕೆಲವೇ ಮಂದಿ ಈ ಮದುವೆಯಲ್ಲಿ ಭಾಗಿಯಾಗಿದ್ದಾರೆ. ಮಾರ್ಚ್ 4 ರಂದು ಈ ಜೋಡಿ ಹೈದರಾಬಾದ್ ನಲ್ಲಿ ಅದ್ಧೂರಿ ರಿಸೆಪ್ಷನ್ ಆಯೋಜಿಸಿದ್ದು ಚಿತ್ರರಂಗದ ಗಣ್ಯರು ಭಾಗಿಯಾಗಲಿದ್ದಾರೆ.