Publish Date: Mon, 23 Feb 2026 (09:50 IST)
Updated Date: Mon, 23 Feb 2026 (09:54 IST)
ಹೈದರಾಬಾದ್: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಈಗ ತಮ್ಮ ಮದುವೆಯನ್ನು ಅಧಿಕೃತಗೊಳಿಸಿದ್ದಾರೆ. ರಶ್ಮಿಕಾ ಕ್ಯೂಟ್ ಪೋಸ್ಟ್ ನಲ್ಲಿ ಏನಿದೆ ನೋಡಿ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಯಾಗುತ್ತಿದ್ದಾರೆ ಎಂದು ಕೆಲವು ದಿನಗಳಿಂದ ಸುದ್ದಿ ಹರಿದಾಡುತ್ತಲೇ ಇತ್ತು. ಅವರ ಮದುವೆಯ ಎಲ್ಲಾ ವಿವರಗಳೂ ಹೊರಬೀಳುತ್ತಲೇ ಇತ್ತು. ಆದರೆ ಇದುವರೆಗೆ ಅವರಿಬ್ಬರೂ ಮದುವೆ ವಿಚಾರವನ್ನು ಅಧಿಕೃತಗೊಳಿಸಿರಲಿದ್ದಾರೆ.
ಅಭಿಮಾನಿಗಳೇ ನಮ್ಮಿಬ್ಬರ ಸಂಬಂಧಕ್ಕೆ ವಿರೋಶ್ ಎಂದು ಹೆಸರಿಟ್ಟಿದ್ದಾರೆ. ನಾವು ನಮ್ಮ ಮದುವೆಗೆ ಅದೇ ಹೆಸರಿಡುತ್ತಿದ್ದೇವೆ. ನಿಮ್ಮ ಪ್ರೀತಿಯೇ ನಮ್ಮಿಬ್ಬರ ಸಂಬಂಧವನ್ನು ಗಟ್ಟಿಗೊಳಿಸಿದೆ. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು ಎಂದಿದ್ದಾರೆ.
ಫೆಬ್ರವರಿ 26 ಕ್ಕೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆಯಾಗಲಿದ್ದಾರೆ. ಈ ಮದುವೆಗೆ ಕೇವಲ ಆಪ್ತರು ಮಾತ್ರ ಹಾಜರಾಗಲಿದ್ದಾರೆ. ಮಾರ್ಚ್ 4 ಕ್ಕೆ ಹೈದರಾಬಾದ್ ನಲ್ಲಿ ಸಿನಿಮಾ ಕ್ಷೇತ್ರದ ಗಣ್ಯರು, ಸ್ನೇಹಿತರಿಗಾಗಿ ಇಬ್ಬರೂ ಆರತಕ್ಷತೆ ಆಯೋಜಿಸಿದ್ದಾರೆ.