Publish Date: Thu, 10 Aug 2023 (09:28 IST)
Updated Date: Thu, 10 Aug 2023 (09:30 IST)
ಹೈದರಾಬಾದ್: ರಶ್ಮಿಕಾ ಮಂದಣ್ಣ ಜೊತೆಗಿನ ಡೇಟಿಂಗ್ ರೂಮರ್ ನಡುವೆಯೇ ನಟ ವಿಜಯ್ ದೇವರಕೊಂಡ ಮದುವೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಖುಷಿ ಸಿನಿಮಾದ ಪ್ರಮೋಷನ್ ನಲ್ಲಿ ಮದುವೆ ಬಗ್ಗೆ ತಮ್ಮ ಮನದಾಳವನ್ನು ವಿಜಯ್ ಹಂಚಿಕೊಂಡಿದ್ದಾರೆ. ಇದಕ್ಕೆ ಮೊದಲು ಮದುವೆ ಎಂದರೇನೇ ನನಗೆ ಕಿರಿ ಕಿರಿಯಾಗುತ್ತಿತ್ತು. ಆದರೆ ಈಗ ನಾನು ನನ್ನ ಗೆಳೆಯರು ಮದುವೆಯಾಗಿ ಖುಷಿಯಾಗಿರುವುದನ್ನು ಮತ್ತು ಕಷ್ಟಪಡುತ್ತಿರುವುದನ್ನೂ ನೋಡಿ ಎಂಜಾಯ್ ಮಾಡುತ್ತಿದ್ದೇನೆ. ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಬರುವ ಘಟ್ಟ. ನಾನೂ ಈಗ ಅದಕ್ಕೆ ರೆಡಿಯಾಗಿದ್ದೇನೆ.
ಕಳೆದ ಕೆಲವು ಸಮಯದಿಂದ ನನಗೆ ಸೂಕ್ತವಾದ ಹುಡುಗಿಗಾಗಿ ಹುಡುಕಾಡುತ್ತಾ ಇದ್ದೆ. ನಾನು ಈಗ ಮದುವೆಗೆ ರೆಡಿಯಾಗಿದ್ದೇನೆ. ಎರಡು ವರ್ಷಗಳಲ್ಲಿ ಮದುವೆಯಾಗಲು ತೀರ್ಮಾನಿಸಿದ್ದೇನೆ. ನಾನೂ ಎಲ್ಲರಂತೆ ಮದುವೆಯಾಗಿ ಸಾಂಸಾರಿಕ ಜೀವನ ಹೊಂದಲು ಬಯಸುತ್ತಿದ್ದೇನೆ ಎಂದಿದ್ದಾರೆ.