Webdunia - Bharat's app for daily news and videos

Install App

ಹಿರಿಯ ನಟಿ ಲೀಲಾವತಿ ವಿಧಿವಶ: ಅಂತಿಮ ಸಂಸ್ಕಾರ, ದರ್ಶನ ಕುರಿತ ಮಾಹಿತಿ

Webdunia
ಶುಕ್ರವಾರ, 8 ಡಿಸೆಂಬರ್ 2023 (20:23 IST)
ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾವಂತ, ಹಿರಿಯ ನಟಿ ಲೀಲಾವತಿ ಇಂದು ವಿಧಿವಶರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.

ಕಳೆದ ಕೆಲವು ದಿನಗಳಿಂದ ವಯೋಸಹಜ ಖಾಯಿಲೆಗಳಿಂದಾಗಿ ಲೀಲಾವತಿ ಹಾಸಿಗೆ ಹಿಡಿದಿದ್ದರು. ಇಂದು ನೆಲಮಂಗಲದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ. ಅಮ್ಮನ ಸಾವಿನ ವಿಚಾರ ತಿಳಿಯುತ್ತಿದ್ದಂತೇ ಪುತ್ರ ವಿನೋದ್ ರಾಜ್ ಕುಸಿದು ಬಿದ್ದಿದ್ದಾರೆ.

ಆಸ್ಪತ್ರೆ ಬಳಿ ಅಭಿಮಾನಿಗಳು ಜಮಾಯಿಸಿದ್ದಾರೆ. ನಟ ಶಿವರಾಜ್ ಕುಮಾರ್ ಈಗಾಗಲೇ ಆಸ್ಪತ್ರೆಗೆ ಬಂದು ಲೀಲಾವತಿಯವರ ಅಂತಿಮ ದರ್ಶನ ಪಡೆದರು. ಮೊದಲು ಮೃತದೇಹವನ್ನು ಮೈಲನಹಳ್ಳಿಯ ಮನೆಗೆ ಕರೆದೊಯ್ಯಲಾಗುತ್ತದೆ. ಅಲ್ಲಿ ಕೆಲವು ಸಮಯ ಇಟ್ಟು ಬಳಿಕ ನೆಲಮಂಗಲ ಜ್ಯೂನಿಯರ್ ಕಾಲೇಜು ಮೈದಾನಕ್ಕೆ ಕರೆತಂದು ಅಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ನಾಳೆ ಮಧ‍್ಯಾಹ್ನದವರೆಗೆ ಲೀಲಾವತಿಯವರ ಅಂತಿಮ ದರ್ಶನಕ್ಕೆ ವ್ಯವಸ್ಥೆಯಿರಲಿದೆ. ಅದಾದ ಬಳಿಕ ಸೋಲದೇವನಹಳ್ಳಿಯ ತೋಟದ ಮನೆಯಲ್ಲಿಯೇ ಲೀಲಾವತಿಯವರ ಅಂತಿಮ ಸಂಸ್ಕಾರ ನಡೆಯಲಿದೆ. ಈಗಾಗಲೇ ಪೊಲೀಸರು ಅಂತಿಮ ದರ್ಶನಕ್ಕೆ ಬೇಕಾದ ವ್ಯವಸ್ಥೆ ಮಾಡುತ್ತಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು, ಸ್ಯಾಂಡಲ್ ವುಡ್ ಕಲಾವಿದರು ಅಂತಿಮ ದರ್ಶನಕ್ಕೆ ಬರಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶೂಟಿಂಗ್‌ಗಾಗಿ ತಂಗಿದ್ದ ಹೊಟೇಲ್‌ನಲ್ಲಿ ಶವವಾಗಿ ಪತ್ತೆಯಾದ ಮಲಯಾಳಂ ನಟ ಕಲಾಭವನ್‌

ಪ್ರಜ್ವಲ್ ರೇವಣ್ಣಗೆ ಶಿಕ್ಷೆಯಾಗುತ್ತಿದ್ದಂತೇ ನಟಿ ರಮ್ಯಾ ರಿಯಾಕ್ಷನ್ ನೋಡಿ

ವಿಜಯ್ ದೇವರಕೊಂಡ ಸೋಲಿನ ಸರಣಿಯನ್ನು ಕೊನೆಗೊಳಿಸಿದ ಕಿಂಗ್‌ಡಮ್‌: ಗೆಳೆಯನ ಸಕ್ಸಸ್‌ಗೆ ರಶ್ಮಿಕಾ ಫುಲ್ ಹ್ಯಾಪಿ

ದಿ ಕೇರಳ ಸ್ಟೋರಿ ಸಿನಿಮಾಗೆ ರಾಷ್ಟ್ರೀಯ ಮನ್ನಣೆ: ಸಿಎಂ ಸೇರಿದಂತೆ ಹಲವರಿಂದ ಅಸಮಾಧಾನ

ಸು ಫ್ರಮ್ ಸೋ ಸಿನಿಮಾಗೆ ಮಲಯಾಳದಲ್ಲಿ ಹೇಗಿದೆ ರೆಸ್ಪಾನ್ಸ್: ಕನ್ನಡದಲ್ಲಿ ಹೊಸ ದಾಖಲೆ

ಮುಂದಿನ ಸುದ್ದಿ
Show comments