Publish Date: Mon, 17 Apr 2023 (09:10 IST)
Updated Date: Mon, 17 Apr 2023 (09:11 IST)
ಬೆಂಗಳೂರು: ಕನ್ನಡದ ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿರುವ ಪ್ರಭಾಸ್ ನಾಯಕರಾಗಿರುವ ಸಲಾರ್ ಸಿನಿಮಾದಲ್ಲಿ ಹಿರಿಯ ನಟ ದೇವರಾಜ್ ಅಭಿನಯಿಸಲಿದ್ದಾರೆ.
ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದಲ್ಲಿ ದೇವರಾಜ್ ಪಾತ್ರ ಮಾಡಲಿರುವುದು ಪಕ್ಕಾ ಆಗಿದೆ. ಆದರೆ ಯಾವ ರೀತಿಯ ಪಾತ್ರ ಮಾಡಿದ್ದಾರೆ ಎನ್ನುವುದು ಗೊತ್ತಾಗಿಲ್ಲ.
ಇದಕ್ಕೆ ಮೊದಲು ಕನ್ನಡದ ಪ್ರತಿಭಾವಂತ ನಟ ಪ್ರಮೋದ್ ಸಲಾರ್ ನಲ್ಲಿ ಅಭಿನಯಿಸಿದ್ದರು. ಕಿರುತೆರೆಯಿಂದ ಹಿರಿತೆರೆಗೆ ಬಂದಿದ್ದ ಪ್ರಮೋದ್ ಗೆ ಸಿನಿಮಾದಲ್ಲಿ ವಿಶೇಷ ಪಾತ್ರ ನೀಡಲಾಗಿದೆ.