ಬಾಲಿವುಡ್ ನಟಿ ಕಂಗನಾ ರಣಾವತ್ ಹಾಗೂ ನಟಿ ಊರ್ಮಿಳಾ ಮಾತೋಂಡ್ಕರ್ ನಡುವೆ ಜಟಾಪಟಿ ಮುಂದುವರಿದಿದೆ.
ಕಂಗನಾ ರಣಾವತ್ ಅವರನ್ನು ‘ರುಡಾಲಿ’ ಅರ್ತಾಥ್ ಹಳ್ಳಿಯವರು ಎಂದು ಊರ್ಮಿಳಾ ಜರಿದಿದ್ದಾರೆ.
ಊರ್ಮಿಲಾ ಮಾತೋಂಡ್ಕರ್ ಅವರು ನಟಿ ಕಂಗನಾ ರಣಾವತ್ ವಿರುದ್ಧ ಹರಿಹಾಯ್ದಿದ್ದಾರೆ.
ಮಹಾರಾಷ್ಟ್ರದ ಬಗ್ಗೆ ಪ್ರತಿಕ್ರಿಯಿಸುವ ಮೊದಲು ಹಿಮಾಚಲ ಪ್ರದೇಶದ ಮಾದಕವಸ್ತು ಸಮಸ್ಯೆಯನ್ನು ನೋಡುವಂತೆ ಕಂಗನಾಗೆ ನಟಿ ಊರ್ಮಿಲಾ ಹೇಳಿದ್ದರು.
ಇದಕ್ಕೆ ಕಂಗನಾ ತಿರುಗೇಟು ನೀಡುತ್ತಿದ್ದು, ಇಬ್ಬರು ನಟಿಯರ ವಿರುದ್ಧ ಟ್ವಿಟ್ಟರ್ ವಾರ್ ಶುರುವಾಗಿದೆ.