Select Your Language

Notifications

webdunia
webdunia
webdunia
webdunia

ಏಪ್ರಿಲ್ ನ್ನು ಮಾಯವಾದ ತಿಂಗಳು ಎಂದು ಘೋಷಿಸಲಿ: ಉಪೇಂದ್ರ

ಏಪ್ರಿಲ್ ನ್ನು ಮಾಯವಾದ ತಿಂಗಳು ಎಂದು ಘೋಷಿಸಲಿ: ಉಪೇಂದ್ರ
ಬೆಂಗಳೂರು , ಶನಿವಾರ, 11 ಏಪ್ರಿಲ್ 2020 (09:43 IST)
ಬೆಂಗಳೂರು: ಲಾಕ್ ಡೌನ್ ನಿಂದಾಗಿ ಈ ಮಾರ್ಚ್ ಮತ್ತು ಏಪ್ರಿಲ್ ತಿಂಗಳು ಜನರಿಗೆ ಆದಾಯವೂ ಇಲ್ಲ, ಕೆಲಸವೂ ಇಲ್ಲ  ಎನ್ನುವ ಪರಿಸ್ಥಿತಿ ಎದುರಾಗುತ್ತದೆ. ಹೀಗಿರುವಾಗ ಏಪ್ರಿಲ್ ತಿಂಗಳನ್ನು ಮಾಯವಾದ ತಿಂಗಳು ಎಂದು ಘೋಷಿಸಬಾರದೇಕೆ?


ಇಂತಹದ್ದೊಂದು ಐಡಿಯಾವನ್ನು ನಟ, ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಈ ಬಗ್ಗೆ ಉಪೇಂದ್ರ ಆಸಕ್ತಿಕರ ವಿಚಾರವನ್ನು ಮಂಡಿಸಿದ್ದಾರೆ.

ಏಪ್ರಿಲ್ ತಿಂಗಳನ್ನು 2020 ರ ‘ಮಾಯವಾದ ತಿಂಗಳು’ ಎಂದು ಘೋಷಿಸಿ ಕೇಂದ್ರ ಅಥವಾ ರಾಜ್ಯ ಸರ್ಕಾರ ಮತ್ತು ಎಲ್ಲಾ ಜನರು ತಮಗೆ ಬರುವ ಸಂಬಳ, ಬಾಡಿಗೆ, ವಿದ್ಯುತ್ ಬಿಲ್, ನೀರನ ಬಿಲ್, ಇಎಂಐನ ಇಂಟರೆಸ್ಟ್  ಇತರೆ ಎಲ್ಲವನ್ನೂ ಬಿಟ್ಟುಕೊಟ್ಟು ಜನರು ಮತ್ತು ಸರ್ಕಾರಕ್ಕೆ ಆಗುವ ಹೊರೆ ತಪ್ಪಿಸಬಾರದೇಕೆ? ಅರ್ಥ ಶಾಸ್ತ್ರ ಪರಿಣಿತರು ಇದಕ್ಕೆ ಉತ್ತರಿಸಬೇಕು ಎಂದು ಉಪೇಂದ್ರ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾದ ಈ ಕ್ರಿಕೆಟಿಗನಿಗೆ ಕನ್ನಡದ ಕೆಜಿಎಫ್ ಸಿನಿಮಾವೆಂದರೆ ಅಚ್ಚುಮೆಚ್ಚು!