Publish Date: Mon, 10 Aug 2020 (10:47 IST)
Updated Date: Mon, 10 Aug 2020 (10:48 IST)
ಹೈದರಾಬಾದ್: ಸ್ಯಾಂಡಲ್ ವುಡ್ ನ ಖ್ಯಾತ ನಟ ಉಪೇಂದ್ರ ಅವರು ಮತ್ತೆ ತೆಲುಗಿನ ಕಡೆಗೆ ಮುಖಮಾಡಿದ್ದಾರಂತೆ.
ಈಗಾಗಲೇ ತೆಲುಗಿನ ಸಿನಿಮಾಗಳಲ್ಲಿ ನಟಿಸಿ, ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ ನಟ ಉಪೇಂದ್ರ ಇದೀಗ ಮತ್ತೆ ತೆಲುಗಿನ ಕಡೆಗೆ ಮುಖ ಮಾಡಿದ್ದಾರೆ. ‘ಬಾಕ್ಸರ್’ ಹೆಸರಿನ ಚಿತ್ರದಲ್ಲಿ ಉಪೇಂದ್ರ ನಟಿಸುವುದು ಬಹುತೇಕ ಖಚಿತವಾಗಿದೆ. ಇದರಲ್ಲಿ ವರುಣ್ ತೇಜ್ ನಾಯಕನಾಗಿ ನಟಿಸಲಿದ್ದು, ಉಪೇಂದ್ರ ಈ ಚಿತ್ರದಲ್ಲಿ ಯಾವ ಪಾತ್ರ ನಿರ್ವಹಿಸಲಿದ್ದಾರೆ ಎಂಬುದು ಮಾತ್ರ ಕುತೂಹಲಕಾರಿಯಾಗಿದೆ.